ದೇಶ

ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್ ಶರ್ಮಾ ಔಟ್, ಖ್ಯಾತ ಕ್ರಿಕೆಟಿಗರೊಬ್ಬರಿಂದ ವಿಷಯ ಲೀಕ್ ಆಯ್ತಾ..?

INDIAN PREMIER LEAGUE 2024-25ರಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಅವರು ಆಡುವುದು ಬಹುತೇಕ ಅನುಮಾನ ಅಂತಾ ಹೇಳಲಾಗ್ತಿದೆ. ಇದರ ನಡುವೆಯೇ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು, ರೋಹಿತ್ ಶರ್ಮಾ ಅವರು ಮುಂಬೈ ತಂಡದಲ್ಲಿ ಆಡುವುದು ಬಹುತೇಕ ಅನುಮಾನ ಎಂದು ಹೇಳಿಕೆ ಕೊಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ ) ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಆಗುವತ್ತ ಕೊಂಡೊಯ್ದಿದ್ದ ರೋಹಿತ್ ಶರ್ಮಾ ಅವರು ಸದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆಯೇ..? ಇಂಥದ್ದೊಂದು ಪ್ರಶ್ನೆಗೆ ಮಾಜಿ ಕ್ರಿಕೆಟ್ಗ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಉತ್ತರ ನೀಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ನಲ್ಲಿ ರೋಹಿತ್ ಶರ್ಮಾ ಅವರನ್ನು ಮುಂಬೈ ತಂಡದ ನಾಯಕತ್ವ ಸ್ಥಾನದಿಂದ ತಂಡದ ಮ್ಯಾನೇಜ್ಮೆಂಟ್ ಕೆಳಕ್ಕಿಳಿಸಿತ್ತು. ಅವರ ಜಾಗಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ತರಲಾಗಿತ್ತು, ಆಗಿನಿಂದ ರೋಹಿತ್ ಶರ್ಮಾ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಸಂಬಂಧ ಅಷ್ಟಾಗಿ ಚೆನ್ನಾಗಿಲ್ಲ ಎಂದು ಹೇಳಲಾಗುತ್ತಿದೆ. ಈಗ, ಇದಕ್ಕೆ ಕಳಸವಿಟ್ಟಂತೆ ಆಕಾಶ್ ಚೋಪ್ರಾ ಅವರು, ಕ್ರಿಕೆಟ್ ಅಭಿಮಾನಿಯೊಬ್ಬನ ಪ್ರಶ್ನೆಯೊಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡಿದ್ದಾರೆ.