ಸ್ಪೆಷಲ್ ಸ್ಟೋರಿ

ಮಹಾಭಾರತದ ಮಹಾತ್ಯಾಗಿ ಭೀಷ್ಮನ ಜೀವನಗಾಥೆ

ಭೀಷ್ಮನಿಗಂತೂ ಹೆಜ್ಜೆ ಇಟ್ಟರೆ ಅನ್ಯಾಯ ಆಗುತ್ತಲೇ ಇತ್ತು. ಇಂತಹ ಭೀಷ್ಮನ ಕುರಿತು ಹಲವರು ಕುತೂಹಲ ಘಟ್ಟಗಳನ್ನ ಇಂದು ತಿಳಿಯಲೇ ಬೇಕಿದೆ.

ಬಾಲ್ಯದಲ್ಲಿ ತಂದೆ ಜತೆಗಿರಲಿಲ್ಲ. ತಾನು ಯುವರಾಜ ಅನ್ನೋದೇ ಗೊತ್ತಿರಲಿಲ್ಲ. ಹೀಗೆ ಒಂಟಿ ಬದುಕು - ಯೋಧನಾಗೋ ಆಸೆಗೆ ತಾಯಿ ಗಂಗೆ ಬಿಟ್ಟು ತನ್ನವರ‍್ಯಾರು ಜತೆಯಲ್ಲಿ ಇರಲಿಲ್ಲ. ಹೀಗೆ ಬದುಕು ಆರಂಭಿಸಿದ ಮಹಾಭಾರತದ ಮಹಾರಥಿಗಳ ಮಹಾರಥಿ ದೇವವ್ರತ. 

ಕುರುಕುಲದ ಮಹಾರಾಜ ಶಾಂತನು ನಿಮ್ಮ ತಂದೆ ಅವ್ರ ಮಾತು ಕೇಳು - ಸಂತೋಷವಾಗಿ ನೋಡಿಕೋ ಅಂತಾ ತಾಯಿ ಗಂಗೆ ಹೇಳಿದ್ದೇ ಸಾಕಾಯ್ತು. ತನ್ನ ಇಡೀ ಬದುಕು ಸೇವಕನಾಗೇ ಕಳೆದುಕೊಂಡ ತ್ಯಾಗಿಯೇ ಈ ಭೀಷ್ಮ. ಮಹಾಕಾವ್ಯ ಮಹಾಭಾರತದ ಆದಿ - ಅಂತ್ಯಕ್ಕೂ ಭೀಷ್ಮ ಬೇಕೇ ಬೇಕು.. ಇಂತಹ ಭೀಷ್ಮನಿಗಂತೂ ಹೆಜ್ಜೆ ಇಟ್ಟರೆ ಅನ್ಯಾಯ ಆಗುತ್ತಲೇ ಇತ್ತು.  ಇಂತಹ ಭೀಷ್ಮನ ಕುರಿತು ಹಲವರು ಕುತೂಹಲ ಘಟ್ಟಗಳನ್ನ ಇಂದು ತಿಳಿಯಲೇ ಬೇಕಿದೆ. 

ಆಸ್ತಿ ಸಿಕ್ತು , ಸುಖ ಬಂತೂ ಅಂತಾ ತಾಯಿ ಮಾತು ಎಷ್ಟು ದಿನ ಕೇಳ್ತಾರೆ ಈಗಿನ ಮಕ್ಕಳು. ದಿನಾ , ತಿಂಗಳು , ವರ್ಷ ಮಾತ್ರ . ಆದರೆ , ಮಹಾಭಾರತದ ಭೀಷ್ಮ ತಾಯಿ ಗಂಗೆ ಹೇಳಿದಕ್ಕೆ ತಂದೆ ಖುಷಿಗಾಗಿ, ಮಲತಾಯಿ ಆಸೆಗಾಗಿ ಇಡೀ ಬದುಕು ಕಟ್ಟಪಾಣೆ ಪಾಲಿಸಿದ ಮಹಾನ್ ತ್ಯಾಗಿ. 

ಚಿಕ್ಕ ವಯಸ್ಸಿನಿಂದ ತಂದೆ ಗೊತ್ತಿಲ್ಲದ ಈ ದೇವವ್ರತನಿಗೆ ತಾಯಿ ಗಂಗೆಯಿಂದ, ತಂದೆ ಮಹಾರಾಜ ಶಾಂತನು ಬಗ್ಗೆ ಗೊತ್ತಾಯಿತು. ಎಲ್ಲ ಮಕ್ಕಳಂತೆ ತಂದೆ ಜೊತೆ ಅರಮನೆ , ಯುದ್ಧ , ವೈಭವ ಅಂತಾ ಸುಖ ಜೀವನ ಕಳೆಯೋದಕ್ಕೆ ದೇವವ್ರತ ತನ್ನ ಯೌವನದ ವಯಸ್ಸಿನಲ್ಲಿ ಬಂದಿದು. ಆದರೆ ಅಲ್ಲಿ ಆಗೋದೆ ಬೇರೆ ಆಗಿತ್ತು. ಎದೆ ಎತ್ತರ ಬೆಳೆದ ಮಗನಿಗಿಂತ ಇಲ್ಲಿ ಮಹಾರಾಜ ಶಾಂತನು ತನ್ನ ಪ್ರೇಯಸಿ ಸತ್ಯವತಿ ಬಗ್ಗೆನೆ ಚಿಂತೆಯಲ್ಲಿ ಮುಳುಗಿ ಬಿಡುತ್ತಾರೆ. ಊಟ, ನಿದ್ದೆ, ವೈಭವ ಎಲ್ಲ ಮರೆತು ಮೀನಿನ ಮೈ ಮಾಟದಂತ ಸುಂದರಿ ಸತ್ಯವತಿ ಜಪದಲ್ಲಿ ಮುಳುಗುತ್ತಾರೆ. ಆಸೆ ಪಟ್ಟು ಬಂದ ಈ ದೇವವ್ರತನಿಗೆ ತಂದೆ ಪ್ರೀತಿ ಇರಲಿ, ತಂದೆ ನೋವು ಕಡಿಮೆ ಮಾಡುವುದು ದೊಡ್ಡ ಸವಾಲ್ ಆಗಿ ಬಿಡುತ್ತೆ. ಆಗಲೇ ನೋಡಿ ಈ ಮಹಾರಥಿ ಭೀಷ್ಮ ಬಿಳಿ ಕುದುರೆ ಏರಿ ನದಿ ದಡಕ್ಕೆ ತಂದೆ ಪ್ರೇಯಸಿ ನೋಡೊದಕ್ಕೆ ಬಂದೇ ಬಿಡುತ್ತಾರೆ.

ತನ್ನ ತಂದೆ ಶಾಂತನು ಖುಷಿಗೆ ನೀವು ಬೇಕು , ಮದುವೆ ಆಗಿ ಅಂತಲೂ ಕೇಳುತ್ತಾನೆ. ಮದುವೆ ವಯಸ್ಸಿನ ಮಗ ಇರುವಾಗ ತಂದೆಗೆ ಪ್ರೀತಿ - ಪ್ರೇಮ ದುಃಖ. ಇದನ್ನ ಸತ್ಯವತಿ ಚಿಂತನೇ ಮಾಡಲ್ಲ. ನನಗೆ ನಿಮ್ಮ ತಂದೆ ಬೇಡ. ನೀನು ಮಹಾರಾಜನಾದ್ರೆ ನಾ ಮಲತಾಯಿ ಆಗಿ ದಾಸಿ ಆಗಲು ಬರಲ್ಲ ಅಂತಾ ಮುಖ ಮುರಿಯುತ್ತಾಳೆ. ತಂದೆ ಖುಷಿ - ತಂದೆ ಪ್ರೇಯಸಿ ಹಠಕ್ಕೆ ಸೋತ ಭೀಷ್ಮ ಪ್ರತಿಜ್ಞೆಗೆ ನದಿ ಬಳಿ ಸಾರಸಾರ ಅಂತಾ ಹೋಗಿಯೇ ಬಿಡುತ್ತಾನೆ. ತನ್ನ ಪವಿತ್ರ ತಾಯಿ ಗಂಗೆ ಮೇಲೆ ಪ್ರತಿಜ್ಞೆ ಮಾಡಿ ಇಡೀ ಬದುಕು ಬ್ರಹ್ಮಚಾರ್ಯ ಪಾಲಿಸಲು ಶಪಥ ಮಾಡ್ತಾನೆ. ಇಲ್ಲೇ ಶುರುವಾಯ್ತು ಭೀಷ್ಮನ ನೋವಿನ ಕಥೆ. 

ಯುವರಾಜನಾಗಿದ್ದ ಭೀಷ್ಮ ರಾಜ ಆಗಲೇ ಇಲ್ಲ. ಬರೀ ಯುದ್ಧ ಮಾಡೊದು , ಸ್ವಯಂವರಗಳಲ್ಲಿ ವಧು ಗೆದ್ದು ಮಲತಾಯಿ ಮಕ್ಕಳ ಮದುವೆ ಮಾಡಿಸೊದು,  ಅಸ್ತಿನಾಪುರ ಸಿಂಹಾಸನದ ಸೇವಕ ಆಗಿರೋದು ಮಾತ್ರ ಭೀಷ್ಮನಿಗೆ ಸಿಕ್ಕಿತು.

ಹೆಣ್ಣಿನಿಂದ ಆದಿ - ಅಂತ್ಯ ಅನ್ನೋದು ಇದೆ . ಇದೇ ನೋಡಿ ವಿಧಿ ಸನ್ಯಾಸ ಆಶ್ರಮ ಸೇರಬೇಕಾದ ತಂದೆಗೆ ಮದುವೆ - ಮದುವೆ ಆಗಬೇಕಾದ ಮಗನಿಗೆ ಇಡೀ ಬದುಕು ಸನ್ಯಾಸ. ಅಷ್ಟೇ ಅಲ್ಲ ತ್ಯಾಗ ಮಾಡಿದಕ್ಕೆ ನೆಮ್ಮದಿನೂ ಸಿಗಲ್ಲ. ಹೆಂಡತಿ, ಮಕ್ಕಳು ,ಮೊಮ್ಮಕ್ಕಳು , ಪರಿವಾರವೂ ಇರಲ್ಲ. ಬರೀ ಸೇವಕನಂತೆ ಕುಗ್ಗಬೇಕಾಯ್ತು ಈ ಭೀಷ್ಮ. ಬ್ರಹ್ಮಚಾರ್ಯ ಪ್ರತಿಜ್ಞೆ ಮಾಡಿ ಧರ್ಮ ಪಾಲಿಸಿದಕ್ಕೆ ನಪುಂಸಕ, ಹೇಡಿ , ಮುದ್ದಿ ಹುಲಿ , ಕುಟುಂಬ ಹೀನಾ ಅಂತಾ ಹೀಯಾಳಿಸಿ ತಮ್ ಕೆಲಸಕ್ಕೆ ಬಳಸಿಕೊಂಡವರೆ ಮಹಾಭಾರತದುಕ್ಕೂ ಜಾಸ್ತಿ. ಭೀಷ್ಮನ ಪೌರುಷಕ್ಕೆ ಇಡೀ ಭರತವರ್ಷ ತಲೆಬಾಗಿತು. ಆದರೆ , ಅವರದೇ ಕುರುವಂಶ ಹೀನಾಯವಾಗಿ ನಡೆಸಿಕೊಂಡು ಬರೀ ಕಣ್ಣಿರಲ್ಲಿ ಬದುಕುವಂತೆ ಮಾಡಿತು. 

ಈಗಂತೂ ಕ್ಷಣಕ್ಕೊಂದು ಬಣ್ಣ ದಿನಕ್ಕೊಂದು ಮಾತು ಆಡೊರೋ ಕಾಮನ್. ಆದರೆ , ಮಹಾಭಾರತದ ಭೀಷ್ಮ ಹಾಗಲ್ಲ . ಕೊಟ್ಟ ಮಾತಿಗೆ ಇಡೀ ಜೀವನ ತ್ಯಾಗ ಮಾಡಿದ ಮಹಾನ್ ಸಾಧಕ. ಇಂತಹ ಮಗನಿಗೆ ಪ್ರೇಯಸಿ ಸತ್ಯವತಿಗೊಸ್ಕರ ಮಹಾರಾಜ ಶಾಂತನು ಶಾಪದ ಬದುಕು ಕೊಟ್ಟ , ಆದರೂ ಮಹಾಭಾರತದ ಭೀಷ್ಮನ ಕುಟುಂಬ ಪ್ರೇಮ, ವಚನ ಪಾಲನೆಗೆ ಸಾಠಿಯೇ ಇಲ್ಲ.