ಕ್ರೀಡೆಗಳು

INDIA VS NEWZEALAND: ಭರ್ಜರಿ ಕಮ್​ ಬ್ಯಾಕ್​ ಮಾಡಿದ ಟೀಂ ಇಂಡಿಯಾ, 3ನೇ ದಿನದಾಟದ ಅಂತ್ಯಕ್ಕೆ ಭಾರತ 231ಕ್ಕೆ 3 ವಿಕೆಟ್​ ಕಳೆದುಕೊಂಡಿದೆ

ಬೆಂಗಳೂರು: ರೋಹಿತ್ ಶರ್ಮ, ಯಶಸ್ವಿ ಜೈಸ್ವಾಲ್​​ ಸ್ಟಡಿ ಸ್ಟಾರ್ಟ್​, ಕೊಯ್ಲಿ ಮತ್ತು ಸರ್ಫರಾಜ್​​​​ ಅದ್ಭುತ ಆಟದಿಂದ ಟೀಂ ಇಂಡಿಯಾ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿದೆ..

ಸ್ನೇಹಿತರೇ ಮೊದಲು ಇನ್ನಿಂಗ್ಸ್ನಲ್ಲಿ ಕೇವಲ 46ರನ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದ್ದ ಭಾರತ, ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದೆ, ರೋಹಿತ್ ಶರ್ಮ ಅರ್ಧ ಶತಕದ ನೆರವಿನಿಂದ ಶುರುವಾದ ಭಾರತದ ಎರಡನೇ ಇನ್ನಿಂಗ್ಸ್, ವಿರಾಟ್ ಕೊಯ್ಲಿ ಮತ್ತು ಸರ್ಫರಾಜ್ ಖಾನ್ ಅರ್ಧ ಶತಕದ ಅದ್ಬುತ ಆಟದಿಂದ ಭಾರತ 3 ವಿಕೆಟ್ ಕಳೆದುಕೊಂಡು 231 ರನ್ ಕಲೆ ಹಾಕಿದೆ..

ಇಲ್ಲಿ ಭಾರತ ಸ್ವಲ್ಪ ಯಾಮಾರಿದ್ರೂ ಕೈ ತಪ್ಪೋ ಸಾಧ್ಯತೆ ಹೆಚ್ಚಿರೋದ್ರಿಂದ ಮೈಮರೆಯೋ ಹಾಗಿಲ್ಲ, ಇನ್ನೂ ಎರಡು ದಿನಗಳ ಆಟ ಬಾಕಿ ಇದೆ, ಭಾರತಕ್ಕೆ ದೊಡ್ಡ ಮೊತ್ತದ ಸ್ಕೋರ್ ಬೇಕಿದೆ, ನಾಳೆ ಅಂದ್ರೆ ಶನಿವಾರ ಏನಾದ್ರೂ ಇಡೀ ದಿನ ಭಾರತ ಬ್ಯಾಟಿಂಗ್ ಮಾಡಿದ್ದೇ ಆದಲ್ಲಿ ಗೆಲವಿನ ಓಟದಲ್ಲಿ ಭಾರತವು ಮುಂಚೂಣಿಗೆ ಬರೋ ಸಾಧ್ಯತೆಗಳು ಹೆಚ್ಚಿವೆ..

ಈಗಾಗ್ಲೆ ಮೊದಲ ಇನ್ನಿಂಗ್ಸ್ನಲ್ಲಿ 356ರನ್ ಮುನ್ನಡೆ ಪಡೆದಿರುವ ನ್ಯೂಜಿಲ್ಯಾಂಡ್ಗೆ ಖಡಕ್ಕಾಗೆ ಉತ್ತರ ಕೊಟ್ಟ ಟೀಂ ಇಂಡಿಯಾ 231ಕ್ಕೆ ಮೂರು ವಿಕೆಟ್ ಕಳೆದುಕೊಂಡು 125ರನ್ ಹಿನ್ನಡೆಯಲ್ಲಿದೆ, ಬೇಸರದ ಸಂಗತಿ ಅಂದ್ರೆ 3ನೇ ದಿನದಾಟದ ಕೊನೆ ಬಾಲ್ನಲ್ಲಿ ವಿರಾಟ್ ಕೊಯ್ಲಿ ತಮ್ಮ ವಿಕೆಟ್ ಒಪ್ಪಿಸಿದ್ದು..ನೋಡೋಣ ನಾಳೆ ಯಾವ ರೀತಿ ಟೀಂ ಇಂಡಿಯಾ ಸ್ಕೋರ್ನ ನ್ಯೂಜಿಲ್ಯಾಂಡ್ನ ಸೆಟ್ ಮಾಡುತ್ತೆ ಅಂತಾ..