ವೈರಲ್

ಇದೇ ಕಾರಣಕ್ಕೆ ಧೋನಿ ಗ್ರೇಟ್​..! ರೋಹಿತ್​ ಎಡವುತ್ತಿರೋದೆಲ್ಲಿ?: ಟೀಂ ಇಂಡಿಯಾ ನಾಯಕನಿಗೆ ಮಾಂಜ್ರೇಕರ್ ಖಡಕ್ ಸಲಹೆ

ಧೋನಿ ಇದ್ದರೆ ಕಡೆ ಕ್ಷಣದಲ್ಲು ಮ್ಯಾಚ್​ ಗೆಲ್ಲುವ ಭರವಸೆ ಇರುತ್ತಿತ್ತು. ರೋಹಿತ್ ಅವರು ಸಹ ತಮ್ಮ ನಾಯತ್ವದಲ್ಲಿ ಆ ರೀತಿಯ ಗುಣಮಟ್ಟವನ್ನು ತರಬೇಕಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ನಾವು ಎಷ್ಟೇ ಒಳ್ಳೆಯ ಕೆಲಸ ಮಾಡಲಿ. ಆದರೆ ಒಮ್ಮೆ ಹಿನ್ನಡೆ ಅನುಭವಿಸಿದರೆ ಅದು ಎಷ್ಟೊಂದು ಟೀಕೆ ಟಿಪ್ಪಣಿಗಳಿಗೆ ಕಾರಣವಾಗುತ್ತದೆ ನೋಡಿ. ಈಗ ಟೀಂ ಇಂಡಿಯಾ ಕೂಡ ಸಹ ಇದೇ ಪರಿಸ್ಥಿತಿಯಲ್ಲಿದೆ. ಅದರಲ್ಲೂ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾನ ಬಗ್ಗೆ ಬರುತ್ತಿರುವ ಟೀಕೆಗಳಿಗೆ ಲೆಕ್ಕವಿಲ್ಲ.

ಇದನ್ನೆಲ್ಲ ಗಮನಿಸಿದ ಟೀಂ ಇಂಡಿಯಾ ಮಾಜಿ ಬ್ಯಾಟರ್ ಸಂಜಯ್ ಮಾಂಜ್ರೇಕರ್ ಅವರು ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಡುವೆ ಹೋಲಿಕೆ ಮಾಡಿದ್ದಾರೆ. ರೋಹಿತ್ ಅವರು ಧೋನಿ ಅವರ ಹಾಗೆ ನಾಯಕತ್ವದ ತಂತ್ರಗಳನ್ನು ಕಲಿತುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ಧೋನಿಯ ವಿಶೇಷತೆ ಎನು ಗೊತ್ತಾ?
ಕ್ಯಾಪ್ಟನ್ ಕೂಲ್ ಧೋನಿ ಅವರಿಗೆ ವಿಶಿಷ್ಟ ಸಾಮರ್ಥ್ಯ ಇತ್ತು. ಪಂದ್ಯದಲ್ಲಿ ಹಾನಿ ಆಗುವ ಮೊದಲೇ ಬೌಲಿಂಗ್ ಅನ್ನು ಬದಲಾಯಿಸುತ್ತಿದ್ದರು. ಜೊತೆಗೆ ಧೋನಿ ಇದ್ದರೆ ಕಡೆ ಕ್ಷಣದಲ್ಲು ಮ್ಯಾಚ್ ಗೆಲ್ಲುವ ಭರವಸೆ ಇರುತ್ತಿತ್ತು. ರೋಹಿತ್ ಅವರು ಸಹ ತಮ್ಮ ನಾಯತ್ವದಲ್ಲಿ ಆ ರೀತಿಯ ಗುಣಮಟ್ಟವನ್ನು ತರಬೇಕಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದರೂ ಸಹ ನಾಯಕ ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಕಿವೀಸ್ ವೇಗದ ಬೌಲರ್ ಗಳಾದ ಮ್ಯಾಟ್ ಹೆನ್ರಿ ಮತ್ತು ರೂರ್ಕ್ ಮಾರಕ ದಾಳಿಗೆ ಭಾರತ ತತ್ತರಿಸಿ ಕೇವಲ 46 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನೂ ಕಳೆದುಕೊಂಡಿತು. ಈ ಮೂಲಕ ಭಾರತ ಮೇಲೆ ಭಾರೀ ಒತ್ತಡ ಹೇರಿದೆ.

ಹೀಗಾಗಿ ಸಂಜಯ್ ಮಾಂಜ್ರೇಕರ್ ಅವರು ರೋಹಿತ್ ಶರ್ಮಾ ಅವರಿಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ತಂಡ ಸಂಕಷ್ಟದ ಸಮಯದಲ್ಲಿ ಇದ್ದಾಗ ಮಹೇಂದ್ರ ಸಿಂಗ್ ಧೋನಿ ಅವರು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದರು. ಅವರ ನಾಯಕತ್ವದ ಗುಣಗಳು ಯಾವುವು ಎಂಬುದನ್ನು ನೆನಪಿಸಿದ್ದಾರೆ.