ಕರ್ನಾಟಕ

'ಎಲ್ಲೋ ಜೋಗಪ್ಪ ನಿನ್ನರಮನೆ' ಸಿನಿಮಾದ ಜಾಣಮರಿ ಹಾಡು ರಿಲೀಸ್

ಹಾಡಿನಲ್ಲಿ ಅಂಜನ್ ನಾಗೇಂದ್ರ ಹಾಗೂ ವೆನ್ಯಾ ರೈ ಜೋಡಿಯಾಗಿ ಮಿಂಚಿದ್ದಾರೆ. ಕನ್ನಡ ಹುಡ್ಗನಾಗಿ ಅಂಜನ್‌ ಕಾಣಿಸಿಕೊಂಡ್ರೆ, ವೆನ್ಯಾ ರೈ ಮರಾಠಿ ಹುಡ್ಗಿಯಾಗಿ ಅಭಿನಯಿಸಿದ್ದಾರೆ. ಮಹಾರಾಷ್ಟ್ರದ ಪಂಢರಪುರದಲ್ಲಿ ಇಡೀ ಹಾಡನ್ನು ಚಿತ್ರೀಕರಣ ಮಾಡಿರುವುದು ವಿಶೇಷ. ನಾಯಕ ಹಾಗೂ ನಾಯಕಿ ನಡುವಿನ ಸುಮಧುರ ಪ್ರೇಮಗೀತೆ ಇದಾಗಿದ್ದು, ಸಂಗೀತ ಪ್ರಿಯರನ್ನು ಗುನುಗುವಂತೆ ಮಾಡಿದೆ.

ಆರಂಭದಿಂದ ಇಲ್ಲಿಯವರೆಗೂ ನಾನಾ ರೀತಿಯಲ್ಲಿ ಭರವಸೆ ಮೂಡಿಸುತ್ತಾ ಬಂದಿರುವ ಸಿನಿಮಾ ಎಲ್ಲೋ ಜೋಗಪ್ಪ ನಿನ್ನರಮನೆ.  ಹೌದಾ ಹುಲಿಯಾ ಹಾಡಿಗೆ ಭರಪೂರ ಮೆಚ್ಚುಗೆ ಸಿಕ್ಕ ಬೆನ್ನಲ್ಲೇ ಚಿತ್ರತಂಡ ಎರಡನೇ ಹಾಡನ್ನು ಅನಾವರಣ ಮಾಡಿದೆ. ಪ್ರಮೋದ್‌ ಮರವಂತೆ ಕ್ಯಾಚಿ  ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕಿ ರಕ್ಷಿತಾ ಸುರೇಶ್‌ ಹಾಗೂ ವಿಶಾಕ್‌ ನಾಗಲಾಪುರ ಧ್ವನಿಯಾಗಿದ್ದಾರೆ. ಜಾಣಮರಿ ಪ್ರೇಮಗೀತೆಗೆ ಶಿಯೋಮ್‌ ಟ್ಯೂನ್‌ ಹಾಕಿದ್ದಾರೆ.

ಹಿಮಾಲಯ ತಪ್ಪಲಲ್ಲಿ ಜೋಗಪ್ಪ! ಕೊರೆವ ಚಳಿಯಲ್ಲಿ ಮುಗಿದ ಎಲ್ಲೋ ಜೋಗಪ್ಪ ನಿನ್ನರಮನೆ ...

ಹಾಡಿನಲ್ಲಿ ಅಂಜನ್ ನಾಗೇಂದ್ರ  ಹಾಗೂ  ವೆನ್ಯಾ ರೈ ಜೋಡಿಯಾಗಿ ಮಿಂಚಿದ್ದಾರೆ. ಕನ್ನಡ ಹುಡ್ಗನಾಗಿ ಅಂಜನ್‌ ಕಾಣಿಸಿಕೊಂಡ್ರೆ, ವೆನ್ಯಾ ರೈ ಮರಾಠಿ ಹುಡ್ಗಿಯಾಗಿ ಅಭಿನಯಿಸಿದ್ದಾರೆ. ಮಹಾರಾಷ್ಟ್ರದ ಪಂಢರಪುರದಲ್ಲಿ ಇಡೀ ಹಾಡನ್ನು ಚಿತ್ರೀಕರಣ ಮಾಡಿರುವುದು ವಿಶೇಷ.  ನಾಯಕ ಹಾಗೂ ನಾಯಕಿ ನಡುವಿನ ಸುಮಧುರ ಪ್ರೇಮಗೀತೆ ಇದಾಗಿದ್ದು, ಸಂಗೀತ ಪ್ರಿಯರನ್ನು ಗುನುಗುವಂತೆ ಮಾಡಿದೆ.

ಚಿತ್ರದಲ್ಲಿ ಸಂಜನಾ ದಾಸ್ ಕೂಡ ಒಂದು ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಬಿರಾದರ್, ಶರತ್ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್ ಮಂಗಳೂರು, ಲಕ್ಷ್ಮೀ ನಾಡಗೌಡ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದಲ್ಲಿ ಅಪ್ಪನ ಮಗನ ಬಾಂಧವ್ಯದ ಎಳೆಯೂ ಇದೆ. ಬೆಂಗಳೂರಿನಿಂದ ಶುರುವಾದ ಪ್ರಯಾಣ ಹಿಮಾಲಯದವರೆಗೆ ಸಾಗುತ್ತದೆ. ಭಾವನಾತ್ಮಕವಾದ ಈ ಸಿನಿಮಾ ಯುವ ಜನರಿಗೆ ಹೆಚ್ಚು ಮನರಂಜನೆ ನೀಡುತ್ತದೆ. ಹಲವು ರಾಜ್ಯಗಳ ಅನೇಕ ಲೊಕೇಷನ್ಗಳಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. 

 ಸೂಪರ್‌ ಹಿಟ್‌   ಸೀರಿಯಲ್ ಗಳನ್ನು ನಿರ್ದೇಶಸಿರುವ ಹಯವದನ  ಅವರು ಚೊಚ್ಚಲ ಬಾರಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ…ಸಿನಿಮಾಗೆ ಶಿವ ಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಛಾಯಾಗ್ರಹಣವಿದೆ…ಪ್ರಮೋದ್ ಮರವಂತೆ ಮತ್ತು ರವೀಂದ್ರ ಮುದ್ದಿ ಸಾಹಿತ್ಯ ಬರೆದಿದ್ದಾರೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನರಸಿಂಹ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ‘ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್’ ಮತ್ತು ‘ಕೃಷ್ಣಛಾಯಾ ಚಿತ್ರ’ ಬ್ಯಾನರ್ ಮೂಲಕ ಪವನ್ ಸಿಮಿಕೇರಿ ಹಾಗೂ ಸಿಂಧು ಹಯವದನ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.