ವೈರಲ್

ಸಾರ್ವಜನಿಕ ರಸ್ತೆಯಲ್ಲಿ ಹುಲಿರಾಯನ ದರ್ಬಾರ್..!

ಹುಣಸೂರು ತಾಲ್ಲೂಕಿನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಯಾವುದೇ ಅಂಜಿಕೆ-ಅಳುಕಿಲ್ಲದೆ ವಾಹನಗಳ ಮುಂದೆ ಹುಲಿ ನಡೆದುಕೊಂಡು ಹೋಗಿದೆ.

ಮೈಸೂರು : ಸಾರ್ವಜನಿಕ ರಸ್ತೆಯಲ್ಲಿ ಹುಲಿಯೊಂದು ನಡೆದುಕೊಂಡು ಬಂದಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ ಹುಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದೆ.

ಹುಣಸೂರು ತಾಲ್ಲೂಕಿನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಯಾವುದೇ ಅಂಜಿಕೆ-ಅಳುಕಿಲ್ಲದೆ  ವಾಹನಗಳ ಮುಂದೆ ಹುಲಿ ನಡೆದುಕೊಂಡು ಬಂದಿದೆ. ರಸ್ತೆಯಲ್ಲೇ ಕೆಲಹೊತ್ತು ಅತ್ತಿಂದಿತ್ತಾ, ಇತ್ತಿಂದತ್ತ ಸಂಚರಿಸಿ ನಂತರ ಕಾಡಿನೊಳಗೆ ಹೊರಟು ಹೋಗಿದೆ. ಹುಲಿಯ ಓಡಾಟ ಪ್ರಯಾಣಿಕರ ಕ್ಯಾಮಾರಾದಲ್ಲಿ ಸೆರೆಯಾಗಿದೆ.