ದೇಶ

ಆನ್​ ಲೈನ್​ ನಲ್ಲೂ ಮದುವೆಯಾಗೋ ಕಾಲ ಬಂತು..ಬಿಜೆಪಿ ಮಾಜಿ ಕಾರ್ಪೋರೇಟರ್ ಪುತ್ರನ ವಿಚಿತ್ರ ವಿವಾಹ..!

ಉತ್ತರ ಪ್ರದೇಶದ ಬಿಜೆಪಿ ಕಾರ್ಪೋರೇಟರ್ ಪುತ್ರನ ವಿವಾಹ ಸಖತ್ ಸುದ್ದಿಯಲ್ಲಿದೆ. ಯಾಕಂದ್ರೆ ಆತ ಆನ್​ ಲೈನ್ ನಲ್ಲಿ ವಿವಾಹ ಮಾಡಿಕೊಂಡು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಈ ಆನ್ ಲೈನ್ ದುನಿಯಾದಲ್ಲಿ ಏನೆಲ್ಲಾ ಮಾಡಬಹುದು. ಬೇಕಾದ ಊಟ, ಬಟ್ಟೆ, ವಸ್ತುಗಳು ಪ್ರತಿಯೊಂದು ಆನ್ ಲೈನ್ ಸಹಾಯದಿಂದ ಮನೆ ಬಾಗಿಲಿಗೆ ಬರುತ್ತವೆ. ಅಷ್ಟೇ ಯಾಕೆ ಈಗಿನ ಜನ ಮದುವೆ ಮಾಡಿಕೊಳ್ಳುವ ಮೊದಲು, ಮ್ಯಾಟ್ರಿಮೋನಿ ಆ್ಯಪ್ ಗಳ ಮೂಲಕ ತಮ್ಮ ಜೋಡಿಯನ್ನ ಅವರೇ ಹುಡುಕಿಕೊಳ್ಳುತ್ತಾರೆ. ಆನ್ ಲೈನ್ ಸಹಾಯದಿಂದ ಪ್ರತಿಯೊಂದು ಅಂಗೈಯಲ್ಲೇ ಸಿಗುತ್ತಿದೆ. ಆದ್ರೆ ಇಲ್ಲೊಬ್ಬ ಆನ್ ಲೈನ್ ನಲ್ಲಿ ಹುಡುಗಿ ನೋಡಿಕೊಳ್ಳುವುದಷ್ಟೇ ಅಲ್ಲ, ಮದುವೆ ಕೂಡ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿದ್ದಾನೆ.

ಉತ್ತರ ಪ್ರದೇಶದ ಬಿಜೆಪಿ ಕಾರ್ಪೋರೇಟರ್ ಪುತ್ರ ಆನ್ ಲೈನ್ ಮೂಲಕ, ಪಾಕಿಸ್ತಾನ ಮೂಲದ ಯುವತಿಯೋರ್ವಳನ್ನು ವಿವಾಹವಾಗಿದ್ದಾನೆ. ಬಿಜೆಪಿ ಕಾರ್ಪೋರೇಟರ್ ತಹಸೀನ್ ಶಾಹಿದ್ ಅವರ ಹಿರಿಯ ಮಗ, ಮೊಹಮ್ಮದ್ ಅಬ್ಬಾಸ್ ಹೈದರ್ ಈ ವಿಚಿತ್ರ ವಿವಾಹವಾಗಿದ್ದಾನೆ.

ಈ ಆನ್ ಲೈನ್ ವಿವಾಹಕ್ಕೂ ಒಂದು ಬಲವಾದ ಕಾರಣವಿದೆ. ಅದೇನಂದ್ರೆ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನತೆಯಿದ್ದು, ವೀಸಾಗೆ ಅರ್ಜಿ ಸಲ್ಲಿಸಿದರೂ ಅದನ್ನು ಪಡೆಯಲಾಗಲಿಲ್ಲ. ಅಲ್ಲದೇ ವಧುವಿನ ತಾಯಿ ಕೂಡ ಅನಾರೋಗ್ಯದ ಕಾರಣದಿಂದ ಆಸ್ಪತ್ರೆ ಸೇರಿದ್ದರು. ಹೀಗಾಗಿ ಎಲ್ಲರ ಒಪ್ಪಿಗೆ ಪಡೆದು ಆನ್ ಲೈನ್ ನಲ್ಲೇ ವಿವಾಹವಾಗಿದ್ದಾರೆ.