ವೈರಲ್

ರಿಷಭ್ ಪಂತ್ ಜೊತೆಗಿನ ಡೇಟಿಂಗ್ ವದಂತಿಗಳಿಗೆ ತೆರೆ ಎಳೆದ ಊರ್ವಶಿ ರೌತೆಲಾ

ನನ್ನನ್ನು ರಿಷಭ್ ಪಂತ್ ಅವರೊಂದಿಗೆ ಸಂಪರ್ಕಿಸುವ ನಿರಂತರ ವದಂತಿಗಳು ಆಧಾರರಹಿತ ಎಂದು ಊರ್ವಶಿ ರೌತೆಲಾ ಹೇಳಿದ್ದಾರೆ

 ನವದೆಹಲಿ: ರೂಪದರ್ಶಿ-ನಟಿ ಊರ್ವಶಿ ರೌತೆಲಾ ಮತ್ತು ಕ್ರಿಕೆಟಿಗ ರಿಷಭ್ ಪಂತ್ ತಮ್ಮ ಡೇಟಿಂಗ್ ವದಂತಿಗಳಿಗೆ ಊರ್ವಶಿ ತೆರೆ ಎಳೆದಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ತಮ್ಮ ಸಂಬಂಧದ ಬಗ್ಗೆ ನಡೆಯುತ್ತಿರುವ ವದಂತಿಗಳನ್ನು ನೇರವಾಗಿ ತಳ್ಳಿಹಾಕಿದರು. "ನನ್ನನ್ನು ರಿಷಭ್ ಪಂತ್ ಅವರೊಂದಿಗೆ ಸಂಪರ್ಕಿಸುವ ನಿರಂತರ ವದಂತಿಗಳು ಆಧಾರರಹಿತ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ನಾನು ಬಯಸುತ್ತೇನೆ. ನಾನು ವೃತ್ತಿ ಜೀವನದ ಬಗ್ಗೆ ನನ್ನೆಲ್ಲಾ ಯೋಚನೆಗಳನ್ನ ಕೇಂದ್ರೀಕರಿಸಿದ್ದೇನೆ. ಊಹಾಪೋಹಗಳೆಲ್ಲಾ ಸುಳ್ಳು. ಈ ಮೀಮ್ಸ್, ವದಂತಿಗಳು ಆಧಾರ ರಹಿತ ಎಂದು ಸ್ಪಷ್ಟನೆ ನೀಡಿದ್ದಾರೆ.