ಸ್ಪೆಷಲ್ ಸ್ಟೋರಿ

ಕೊನೆಗೂ ವರುಣ್ ಆರಾಧ್ಯ ಅಸಲಿ ಮುಖ ರಿವೀಲ್​.. ಮೆಸೇಜ್ ಲೀಕ್ ಮಾಡಿದ ವರ್ಷಾ ಕಾವೇರಿ..!

ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಕೆಟ್ಟದಾಗಿ ಮೆಸೇಜ್ ಕಳಿಸಿಲ್ಲ ಎಂದು ವರುಣ್ ಆರಾಧ್ಯ ಸಮರ್ಥಿಸಿಕೊಂಡ, ವಿಡಿಯೋ ವೈರಲ್ ಆದ ಬೆನ್ನಲ್ಲೇ ವರ್ಷಾ ಕಾವೇರಿ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ.

ಟಿಕ್ ಟಾಕ್, ಇನ್ಸ್ಟಾ ರೀಲ್ಸ್ ನಲ್ಲಿ ಕ್ಯೂಟ್ ಕಪಲ್ ಅಂತಲೇ ಸುದ್ದಿಯಾಗಿ, ಸದ್ದಿಲ್ಲದೇ ಬ್ರೇಕಪ್ ಮಾಡಿಕೊಂಡ ವರುಣ್ ಆರಾಧ್ಯ ಹಾಗೂ ವರ್ಷಾ ಕಾವೇರಿ ಮತ್ತೆ ಸುದ್ದಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆರೋಪ-ಪ್ರತ್ಯಾರೋಪ ಮಾಡಿಕೊಂಡು ಹಲ್ ಚಲ್ ಹಬ್ಬಿಸಿರುವ ಇವರ ಸುದ್ದಿ, ಬಗೆದಷ್ಟು ಬಯಲಾಗುತ್ತಿದೆ. 

ವರುಣ್ ಆರಾಧ್ಯ ವಿರುದ್ಧ ವರ್ಷಾ ಕಾವೇರಿ ದೂರು ನೀಡಿದ ಬೆನ್ನಲ್ಲೇ, ವರುಣ್ ಯೂಟ್ಯೂಬ್ ನಲ್ಲಿ ಸ್ಪಷ್ಟನೆ ನೀಡಿರುವ ವಿಡಿಯೋವೊಂದನ್ನು ಹಾಕಿದ್ರು. ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಕೆಟ್ಟದಾಗಿ ಮೆಸೇಜ್ ಕಳಿಸಿಲ್ಲ ಎಂದು  ಸಮರ್ಥಿಸಿಕೊಂಡಿದ್ರು. ಈ ವಿಡಿಯೋ ಫುಲ್ ವೈರಲ್ ಆದ ಬೆನ್ನಲ್ಲೇ, ವರ್ಷಾ ಕಾವೇರಿ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಪೋಸ್ಟ್ ಹಾಕಿ ಹಲ್ ಚಲ್ ಎಬ್ಬಿಸಿದ್ದಾರೆ. ಅಂದರೆ ವರುಣ್ ಆರಾಧ್ಯ ಅವರದ್ದು ಎನ್ನಲಾದ ಮೆಸೇಜ್ ಸ್ಕ್ರೀನ್ ಶಾಟ್ ಹಾಕಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಇದು ಸಿಂಪತಿಯೋ ಅಲ್ಲವೋ ಎಂದು ಪೋಲಿಂಗ್ ಕ್ರಿಯೇಟ್ ಮಾಡಿದ್ದಾರೆ.

ವರ್ಷಾ ಕಾವೇರಿ ಇನ್ಸ್ಟಾಗ್ರಾಂ ಸ್ಟೋರಿ:

ನಾನು ಇಷ್ಟುದಿನ ಸುಮ್ಮನಿದ್ದೆ. ಆದರೆ ಈಗ ಲಿಮಿಟ್ ಕ್ರಾಸ್ ಆಗಿದ್ದು, ಸಂದರ್ಶದಲ್ಲಿ ಮಾತನಾಡಿ ನನ್ನ ಮರ್ಯಾದೆ ತೆಗೆಯುವ ಕೆಲಸ ನಡೆಯುತ್ತಿದೆ. ಏನಾಗಿದೆ ಎಂದು ಸತ್ಯ ಅರಿಯದೇ ದಯವಿಟ್ಟು ನೆಗೆಟಿವ್ ಕಮೆಂಟ್ ಹಾಕಬೇಡಿ. ನನ್ನನ್ನು ತಪ್ಪಾಗಿ ತೋರಿಸುವುದಕ್ಕಾಗೇ ಈ ಸಂದರ್ಶನ ನಡೆದಿದೆ. ಆ ಸಂದರ್ಶನ ಮಾಡಿದ ವ್ಯಕ್ತಿಗೆ ಕೂಡ ಯಾವ ರೀತಿ ಪ್ರಶ್ನೆ ಕೇಳಬೇಕು ಎನ್ನುವುದು ಗೊತ್ತಿಲ್ಲ. ಹೀಗಾಗಿ ಅವರ ಚಾನೆಲ್ ಗೆ ಮೆಸೇಜ್ ಮಾಡಿ, ಅರ್ಥವಿಲ್ಲದ ಮಾತಾಡಿದ್ದಾರೆ. ನನ್ನ ಮರ್ಯಾದೆ ತೆಗೆಯುತ್ತಿದ್ದಾರೆ ಆ ಸಂದರ್ಶನವನ್ನು ಡಿಲೀಟ್ ಮಾಡಿ ಎಂದು ಕೇಳಿದರೂ ಆ ವ್ಯಕ್ತಿ ಕೇರ್ ಮಾಡಿಲ್ಲ. ಆ ಸಂದರ್ಶನದಲ್ಲಿ ಸುಳ್ಳು ಹೇಳಲಾಗಿದೆ. ನನ್ನ ಕಾರು ಖರೀದಿಸಿರುವುದು EMI ನಿಂದ. ನನ್ನ ಮನೆಯನ್ನು ನಾನು ರೆಡಿ ಮಾಡಿರುವುದು, IKEA ದಿಂದ. ನಾನು ಅವರಿಗೆ ಬ್ರಾಂಡ್ ಪ್ರೊಮೋಷನ್ ಮಾಡಿಕೊಟ್ಟೆ. ಏನೂ ಗೊತ್ತಿಲ್ಲದೇ ಸುಮ್ಮನೆ ಕಮೆಂಟ್ ಮಾಡಬೇಡಿ.