ಕ್ರೀಡೆಗಳು

ನಿವೃತ್ತಿ ವಾಪಸ್​ ಪಡೆದು ಭಾರತ ವಿರುದ್ಧ ಆಡಲು ಸಿದ್ಧ ಎಂದ ವಾರ್ನರ್​​..

ಆಸ್ಟ್ರೇಲಿಯಾ ಕ್ರಿಕೆಟ್​ ದಂತ ಕಥೆ, ವಾಮನ ಮೂರ್ತಿ ವಾರ್ನರ್​​ ಈಗಾಗ್ಲೆ ತಮ್ಮ ಟೆಸ್ಟ್​​ ಕ್ರಿಕೆಟ್​​ ಜೀವನಕ್ಕೆ ವಿದಾಯ ಹೇಳಿದ್ದು ನಿಮಗೆ ಗೊತ್ತೇ ಇದೆ..ಆದ್ರೆ ಈಗ ನೋಡಿ ವಾರ್ನರ್​ ವಾಪಸ್​​ ತಂಡಕ್ಕೆ ಮರಳುವ ಮಾತುಗಳನ್ನಾಡಿದ್ದಾರೆ..

ಮೆಲ್ಬರ್ನ್: ಅಗತ್ಯ ಬಿದ್ದರೆ ನಿವೃತ್ತಿ ವಾಪಸ್ ಪಡೆದು ಭಾರತದ ವಿರುದ್ಧದ ವರ್ಷಾಂತ್ಯದ ಟೆಸ್ಟ್ ಸರಣಿಯಲ್ಲಿ ಮತ್ತೆ ಆರಂಭಿಕನಾಗಿ ಕಣಕ್ಕಿಳಿಯಲು ಸಿದ್ಧ ಎಂದು ಆಸ್ಟ್ರೇಲಿಯಾದ ಬ್ಯಾಟರ್ ಡೇವಿಡ್ ವಾರ್ನರ್ ಹೇಳಿಕೆ ಕೊಟ್ಟಿರೋದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ..
ಕಳೆದ ವರ್ಷದ ಜನವರಿಯಲ್ಲಿ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ರು, ಆ ಬಳಿಕ ಉಸ್ಮಾನ್ ಖ್ವಾಜಾ ಜತೆಗೆ ಆರಂಭಿಕನಾಗಿ ಆಡುತ್ತಿದ್ದ ಸ್ಟೀವ್ ಸ್ಮಿತ್ ಕೂಡ 4ನೇ ಕ್ರಮಾಂಕಕ್ಕೆ ಮರಳಿದ್ದಾರೆ. ಹೀಗಾಗಿ ಆಸೀಸ್ ಟೆಸ್ಟ್ ತಂಡದಲ್ಲಿ ಆರಂಭಿಕ ಸ್ಥಾನವೊಂದು ಖಾಲಿ ಇದೆ, ಇದೇ ವಿಚಾರವಾಗಿ ವಾರ್ನರ್ ನಿವೃತ್ತಿ ವಾಪಸ್ ಪಡೆಯುವ ಬಗ್ಗೆ ಮಾತನಾಡಿರೋದು..