ಕರ್ನಾಟಕ

ಬಿಗ್​ ಬಾಸ್​ ಮನೆಯಲ್ಲಿ ಮಂಜು ತ್ರಿವಿಕ್ರಂ ಹಗ್ಗ ಜಗ್ಗಾಟ, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಯಾಕೆ..?

ರಾಜಕೀಯ ಮಾಡಲು ಬೇಕಿರುವುದು ತಂತ್ರಗಳು ಮತ್ತು ಯುಕ್ತಿ. ಹೆಚ್ಚಾಗಿ ದೈಹಿಕ ಬಲದ ಪ್ರದರ್ಶನಕ್ಕೆ ಒತ್ತು ನೀಡಿದ್ದೀರಿ ಎಂದು ಬಿಗ್ ಬಾಸ್ ಆಕ್ರೋಶ ವ್ಯಕ್ತಪಡಿಸಿದರು.

ದೊಡ್ಮನೆಯಲ್ಲಿ ಈಗ ರಾಜಕೀಯದ ಆಟ ನಡೆಯುತ್ತಿದೆ. ಧರ್ಮಪರ ಸೇನಾ ಪಕ್ಷ ಮತ್ತು ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ ಎಂಬ ಎರಡು ರಾಜಕೀಯ ಪಾರ್ಟಿಗಳನ್ನು ರಚನೆ ಮಾಡಲಾಗಿದೆ. ಒಂದಕ್ಕೆ ತ್ರಿವಿಕ್ರಂ ಲೀಡರ್ ಆಗಿದ್ದರೆ, ಮತ್ತೊಂದಕ್ಕೆ ಐಶ್ವರ್ಯಾ ಲೀಡರ್ ಆಗಿದ್ದಾರೆ. 2 ತಂಡಕ್ಕೂ ‘ಬಿಗ್ ಬಾಸ್’ ಟಾಸ್ಕ್ ಅನ್ನು ನೀಡಿದರು. ಎರಡು ತಂಡದವರು, ಕಿತ್ತಾಟ ನೋಡಿ ಟಾಸ್ಕ್ ರದ್ದಾಗುವಂತೆ ಮಾಡಿದ ಪರಿಣಾಮ, ಸ್ಪರ್ಧಿಗಳಿಗೆ ಬಿಗ್ ಬಾಸ್ ತಕ್ಕ ಶಾಸ್ತಿ ಮಾಡಿದ್ದಾರೆ.

ಕೊಟ್ಟಿರುವ ಬೋರ್ಡ್‌ಗೆ ಎರಡು ತಂಡಗಳು ಬಿಗ್ ಬಾಸ್ ಕಳುಹಿಸುವ ವಸ್ತುಗಳನ್ನು ತೆಗೆದುಕೊಂಡು ತಮ್ಮ ತಮ್ಮ ಪಕ್ಷಗಳ ಪೋಸ್ಟರ್ ಅನ್ನು ರಚಿಸಿ, ಅದನ್ನು ಗೋಡೆ ಮೇಲೆ ಅಂಟಿಸಬೇಕು. ಒಂದು ಪಕ್ಷದವರು ಪೋಸ್ಟರ್ ಅಂಟಿಸಿದರೆ, ಮತ್ತೊಂದು ಪಕ್ಷದವರು ಅದನ್ನು ಕಿತ್ತುಹಾಕಬೇಕು. ಪಕ್ಷಗಳ ಸದಸ್ಯರು ತಮ್ಮ ಪಕ್ಷಗಳ ಪೋಸ್ಟರ್‌ಗಳನ್ನು ಯಾರೂ ಕೀಳದಂತೆ ನೋಡಿಕೊಳ್ಳುವ ಟಾಸ್ಕ್ಇದಾಗಿತ್ತು

ಇಲ್ಲಿ ಕೊಟ್ಟ ಆಟವನ್ನು ಕ್ರೀಡಾ ಮನೋಭಾವದಿಂದ ಸ್ಪರ್ಧಿಗಳು ತೆಗೆದುಕೊಳ್ಳಲಿಲ್ಲ. ಅದರಲ್ಲೂ ತ್ರಿವಿಕ್ರಂ, ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಮಂಜು ಅವರ ಆರ್ಭಟ ಜೋರಾಗಿತ್ತು. ಇವರೆಲ್ಲರ ರೌದ್ರವತಾರಕ್ಕೆ ಹನುಮಂತ ಸುಸ್ತಾಗಿ ಬಿದ್ದು ಬಿಟ್ಟರು. ಟಾಸ್ಕ್ನಲ್ಲಿ ಮಂಜು ಅವರನ್ನು ತಡೆಯಲು ಹೋದ ತ್ರಿವಿಕ್ರಂ ಜೋರಾಗಿ ಗುದ್ದಿದರು. ಅದರ ಪರಿಣಾಮ, ಮಂಜು ತುಟಿಗೆ ಪೆಟ್ಟಾಯಿತು. ಎರಡು ಬಾರಿ ಟಾಸ್ಕ್ ಆಡಿಸಿದರೂ ಯಾವುದೇ ಫಲಿತಾಂಶ ಬರಲಿಲ್ಲ. ಪ್ರತಿಬಾರಿಯೂ ಮಂಜು  ಮತ್ತು ತ್ರಿವಿಕ್ರಂ ಬಹಳ ಆರ್ಭಟದಿಂದಲೇ ಅಖಾಡಕ್ಕೆ ಇಳಿಯುತ್ತಿದ್ದರು. ಉಸ್ತುವಾರಿ ಆಗಿದ್ದ ಮೋಕ್ಷಿತಾ  ಅವರು ತುಂಬಾ ಸಲ ಇದನ್ನು ತಪ್ಪಿಸಲು ಪ್ರಯತ್ನಿಸಿದರು. ಆದರೆ ಏನು ಪ್ರಯೋಜನ ಆಗಲಿಲ್ಲ.

ಯಾವಾಗ ತಾವು ನೀಡಿದ ಟಾಸ್ಕ್ ಅನ್ನು ಸ್ಪರ್ಧಿಗಳು ಸರಿಯಾಗಿ ಆಡಲಿಲ್ಲವೋ, ಆಗ ಸ್ಪರ್ಧಿಗಳ ಮೇಲೆ ಬಿಗ್ ಬಾಸ್ ಕೆಂಡವಾದರು. ರಾಜಕೀಯ ಮಾಡಲು ಬೇಕಿರುವುದು ತಂತ್ರಗಳು ಮತ್ತು ಯುಕ್ತಿ. ಹೆಚ್ಚಾಗಿ ದೈಹಿಕ ಬಲದ ಪ್ರದರ್ಶನಕ್ಕೆ ಒತ್ತು ನೀಡಿದ್ದೀರಿ ಎಂದು ಬಿಗ್ ಬಾಸ್ ಆಕ್ರೋಶ ವ್ಯಕ್ತಪಡಿಸಿದರು. ಈ ಟಾಸ್ಕ್ ವಿಚಾರಕ್ಕೆ ಬಂದರೆ, ಎರಡು ಸುತ್ತು ನಡೆದರೂ, ಫಲಿತಾಂಶ ಘೋಷಣೆ ಮಾಡಲು ಸಾಧ್ಯವಾಗದಂತೆ ಆಗಿದೆ. ಹಾಗಾಗಿ ಈ ಟಾಸ್ಕ್ ಅನ್ನು ರದ್ದು ಮಾಡಿದರು ಬಿಗ್ ಬಾಸ್. ಇಂದಿನ ತಪ್ಪು ಮುಂದಿನ ಪಾಠವಾಗುತ್ತದೆ ಮರೆಯದಿರಿ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿವಿಹಿಂಡಿದರು. ಇನ್ನಾದರೂ ಬಲ ಪ್ರದರ್ಶನ ಬಿಟ್ಟು ಯುಕ್ತಿಯಿಂದ ಸ್ಪರ್ಧಿಗಳು ಆಟ ಆಡುತ್ತಾರಾ? ಗೊತ್ತಿಲ್ಲ