ಕರ್ನಾಟಕ

ಉಡುಪಿ| ಪ್ರಿಯಕರನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ ಪಾಕಡಾ ಪತ್ನಿ

ಉಡುಪಿ: ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನು ಪತ್ನಿಯೇ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ.

ಸ್ನೇಹಿತರೇ ಈ ಅಕ್ರಮ ಸಂಬಂಧ ಅನ್ನೋದೇ ಹಾಗೆ ಕಂಡ್ರಿ, ಅದೊಂದು ಥರಾ ಸ್ಲೋ ಪಾಯ್ಸನ್ ಇದ್ದಂತೆ, ಇಲ್ಲಿ ಯಾರ ಪ್ರಾಣ ಹೋಗುತ್ತೆ ಅಂತಾ ಹೇಳೋದು ಅಸಧ್ಯ, ಒಂದು ಪತಿಯ ಪ್ರಾಣ ಹೋಗ್ಬೋದು, ಇಲ್ಲ ಪತ್ನಿಯ ಪ್ರಾಣ ಹೋಗ್ಬೋದು, ಇಲ್ಲ ಪ್ರಿಯಕರನ ಪ್ರಾಣ ಹೋಗ್ಬೋದು, ಇನ್ನು ಈ ಕೇಸ್ನಲ್ಲಿ ಪ್ರಿಯಕರ ಜೊತೆ ಸೇರಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಪ್ರಾಣವನ್ನೇ ತೆಗೆದುಬಿಟ್ಟಿದ್ದಾಳೆ ಪಾಕಡಾ ಪತ್ನಿ..

ಅಷ್ಟಕ್ಕೂ ಈ ಪ್ರಕರಣದಲ್ಲಿ ಮೊದಲಿಗೆ ಪೊಲೀಸರಿಗೆ ಯಾವುದೇ ಕ್ಲೂ ಸಿಕ್ಕಿರಲಿಲ್ಲ, ಆದ್ರೆ ಯಾವಾಗ ಗಂಡನ ಕೊಲೆ ಮಾಡಿದ ಕಿರಾತಕ ಪತ್ನಿ, ಆ ವಿಚಾರವನ್ನ ತನ್ನ ಸಹೋದರನ ಬಳಿ ಹೇಳಿಕೊಂಡಿದ್ಲಂತೆ, ಇದೇ ಕ್ಲೂ ಮೂಲಕ ಪೊಲೀಸರು ಪತ್ನಿ ಹಾಗೂ ಪ್ರಿಯಕರನನ್ನ ಬಂಧಿಸಿದ್ದಾರೆ..