ವೈರಲ್

ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಕಾಲಿಗೆ ಒದ್ದು ಮಹಿಳೆ ದರ್ಪ..!

ಬೇರೊಬ್ಬ ವಾಹನ ಸವಾರನ ಜೊತೆ ಗಲಾಟೆಗೆ ಇಳಿದಿದ್ದ ಮಹಿಳೆಯನ್ನು ವಿಚಾರಿಸಿದ್ದಕ್ಕೆ, ಟ್ರಾಫಿಕ್ ಪೊಲೀಸರ ಕಾಲಿಗೆ ಒದ್ದಿದ್ದಾಳೆ.

ಟ್ರಾಫಿಕ್ ಪೊಲೀಸರಿಗೆ ಮಹಿಳೆಯೊಬ್ಬಳು ಕಾಲಿನಿಂದ ಒದ್ದು ಅವಾಜ್ ಹಾಕಿರುವ ಘಟನೆ, ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋನು ಎಂಬ ಮಹಿಳೆಯು ಬೇರೊಬ್ಬ ವಾಹನ ಸವಾರನ ಜೊತೆ ಗಲಾಟೆಗೆ ಇಳಿದಿದ್ದು, ಈ ಬಗ್ಗೆ ಪ್ರಶ್ನಿಸಿದ ಸಂಚಾರಿ ಪೊಲೀಸರ ಮೇಲೆ ದರ್ಪ ತೋರಿದ್ದಾರೆ. ಕಾಲಿಗೆ ಒದ್ದಿದ್ದಲ್ಲದೇ ಕಾಲರ್ ಹಿಡಿದು ಹಲ್ಲೆಗೆ ಯತ್ನಿಸಿದ್ದಾಳೆ.