ಕ್ರೀಡೆಗಳು

ಕುಸ್ತಿ ಪಟು ಬಬಿತಾ ಫೋಗಟ್​ ಹೊಸ ಬಾಂಬ್​: ದಂಗಲ್‌ʼ ಸಿನಿಮಾ ಗಳಿಸಿದ್ದು 2,000 ಕೋಟಿ, ನಮಗೆ ಸಿಕ್ಕಿದ್ದು ಕೇವಲ 1 ಕೋಟಿ

ಚಂಡೀಗಢ: ಆಮೀರ್‌ ಖಾನ್‌ ನಟನೆಯ ಬ್ಲಾಕ್‌ಬಸ್ಟರ್‌ ಸಿನಿಮಾ ದಂಗಲ್‌ ಇಡೀ ವಿಶ್ವದಾದ್ಯಂತ ಗಳಿಸಿದ್ದು 2,000 ಕೋಟಿ ರೂ ಅಂತೆ. ಆದ್ರೆ ನಮ್ಮ ಕುಟುಂಬಕ್ಕೆ ಸಿಕ್ಕಿದ್ದು ಕೇವಲ 1 ಕೋಟಿ ರೂ. ಮಾತ್ರ ಎಂದು ಭಾರತದ ಮಾಜಿ ಕುಸ್ತಿಪಟು ಬಬಿತಾ ಫೋಗಟ್‌ ಬೇಸರ ವ್ಯಕ್ತಪಡಿಸಿದ್ದಾರೆ

ಸ್ನೇಹಿತರೇ 2016ರಲ್ಲಿ ತೆರೆ ಕಂಡ‌ ಬಬಿತಾ ಫೋಗಟ್‌ ಅವರ ಜೀವನಾಧಾರಿತ ಬಾಲಿವುಡ್‌ ಸಿನಿಮಾ ದಂಗಲ್‌ ದೇಶಾದ್ಯಂತ ಭರ್ಜರಿ ಯಶಸ್ಸನ್ನ ಗಳಿಸಿತ್ತು, ಸದ್ಯ ಕುಸ್ತಿ ಬಿಟ್ಟು ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಬಬಿತಾ ಅವರು ದಂಗಲ್‌ ಚಿತ್ರದ ಹಣಕಾಸಿನ ವಿವರವನ್ನ ಬಹಿರಂಗಪಡಿಸಿದ್ದಾರೆ. ದಂಗಲ್‌ ಚಿತ್ರವು ವಿಶ್ವದಾದ್ಯಂತ 2,000 ಕೋಟಿ ರೂ. ಗಳಿಸಿತು. ಆದ್ರೆ ಚಿತ್ರ ತಯಾಕರಿಂದ ನಮಗೆ ಸಿಕ್ಕಿದ್ದು ಕೇವಲ 1 ಕೋಟಿ ರೂ. ಮಾತ್ರ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದರಿಂದ ನಿಮಗೆ ಭ್ರಮನಿರಸನವಾಗಿದೆಯೇ ಎಂದು ನಿರೂಪಕರು ಮರು ಪ್ರಶ್ನೆ ಮಾಡಿದಾಗ ಪ್ರತಿಕ್ರಿಯಿಸಿದ ಬಬಿತಾ, ಇದು ತಮ್ಮ ತಂದೆ ಮಹಾವೀರ್ ಸಿಂಗ್‌ ಫೋಗಟ್ ಅವರಲ್ಲಿ ಅಡಗಿರುವ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಏಕೆಂದರೆ ನಮಗೆ ಜನರ ಪ್ರೀತಿ ಹಾಗೂ ಗೌರವ ಬೇಕು ಹಣ ಮುಖ್ಯವಲ್ಲ ಎಂದು ನಮ್ಮ ತಂದೆ ನಮಗೆ ಹೇಳಿದ್ದರು ಎಂದು ಸ್ಮರಿಸಿದ್ದಾರೆ.