ಕನ್ನಡದ ನಟಿ ಆಶಿಕಾ ರಂಗನಾಥ್ ಅಭಿನಯದ ಚಿತ್ರ ‘ಮಿಸ್ ಯೂ’ ತೆಲುಗು ಮತ್ತು ತಮಿಳಿನಲ್ಲಿ ರಿಲೀಸ್‌ಗೆ ರೆಡಿಯಾಗಿದೆ…ಸ್ಟಾರ್ ನಟ ಸಿದ್ಧಾರ್ಥ್ ಅಭಿನಯದ ಮಿಸ್ ಯೂ ಚಿತ್ರದಲ್ಲಿ ನಾಯಕಿಯಾಗಿ ಮಿಂಚ್ತಿದ್ದಾರೆ ಆಶಿಕಾ ರಂಗನಾಥ್.
ಮಿಸ್ ಯೂ ಚಿತ್ರ ಈಗಾಗ್ಲೇ ಪೋಸ್ಟರ್, ಎರಡು ಹಾಡುಗಳಿಂದ ಸುದ್ದಿ ಮಾಡಿತ್ತು. ಮೊನ್ನೆಯಷ್ಟೇ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ರು. ಇದೀಗ ಮಿಸ್ ಯೂ ಚಿತ್ರದ ತ,ಮಿಳು ಟೀಸರ್ ಬಿಡುಗಡೆಯಾಗಿದೆ. 2022ರಲ್ಲಿ ಪಟ್ಟತು ಅರಸನ್‌ತಮಿಳು ಸಿನಿಮಾದಲ್ಲಿಆಶಿಕಾ ನಟಿಸಿದ್ರು.ಇದೀಗ ಮಿಸ್ ಯೂ 2ನೇ ತಮಿಳು ಸಿನಿಮಾ ಆಗಿದೆ.
ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಆಕ್ಷನ್, ರೊಮ್ಯಾಂಟಿಕ್ ಸೀಕ್ವೆನ್ಸ್ ಇದ್ದು,ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದೆ. ಹಾಗೂ ಎನ್ ರಾಜಶೇಖರ್ ನಿರ್ದೇಶನ ಮಾಡಿದ್ದಾರೆ.. ಸಿದ್ಧಾರ್ಥ್ ಜೊತೆಗೆ, ಆಶಿಕಾ ರಂಗನಾಥ್, ಕರುಣಾಕರನ್, ಬಾಲ ಸರವಣನ್, ಲೊಲ್ಲು ಸಭಾ ಮಾರನ್ ಮತ್ತು ಇತರರು ಚಿತ್ರದಲ್ಲಿದ್ದಾರೆ..,ನವೆಂಬರ್ 29ಕ್ಕೆ ಚಿತ್ರ ತೆರೆಕಾಣಲಿದೆ..ಇನ್ನು ಚಿತ್ರವನ್ನು ಸ್ಯಾಮ್ಯುಯೆಲ್ ಮ್ಯಾಥ್ಯು ನಿರ್ಮಾಣ ಮಾಡಿದ್ದಾರೆ.