ಕರ್ನಾಟಕ

ನೀನ್‌ ಯಾವಳೇ ಹೇಯ್‌ ಅನ್ನೋದಕ್ಕೆ.. ಬಾಯಿ ಮುಚ್ಚೇ ಸಾಕು.. ಸಂಜೆ ಮಾರ್ಕೇಟ್‌ ಆಯ್ತು ಬಿಗ್‌ ಬಾಸ್‌ ಶೋ

ಮತ್ತೊಂದೆಡೆ ಹನುಮಂತಗೆ ಧನರಾಜ್‌, ಗೌತಮಿಗೆ ರಜತ್‌, ಚೈತ್ರಾಗೆ ಮಂಜು, ಐಶ್ವರ್ಯಾಗೆ ಭವ್ಯಾ ಸೇರಿ ಮೋಕ್ಷಿತಾ ಮುಖಕ್ಕೆ ನೀರೆರಚಲಾಗಿದ್ದು, ಇಂದಿನ ಎಪಿಸೋಡ್‌ನ ಪ್ರೋಮೋ ವೀಕ್ಷಕರಿಗೆ ಕುತೂಹಲ ಹೆಚ್ಚಿಸಿದೆ..

ನಿಮ್ಮ ಆಟಕ್ಕೆ ನಾನು ಬಲಿಪಶುವಾದೆ ಈ ವಾರ.. ನೀನ್‌ ಯಾವಳೇ ಹೇಯ್‌ ಅನ್ನೋದಕ್ಕೆ.. ಬಾಯಿ ಮುಚ್ಚೇ ಸಾಕು.. ಬಾಯಿ ಮುಚ್ಚು ಅಂದ್ರೆ ನಾನು ಸುಮ್ಮನೆ ಇರೋದಿಲ್ಲ.. ಮುಚ್ಕಂಡು ಇರು ನೀನು.. ಇದೆಲ್ಲಾ ಚೈತ್ರಾ ಮತ್ತು ಐಶ್ವರ್ಯಾ ಮಧ್ಯೆ ನಡೆದಿರುವ ನೀನಾ, ನಾನಾ ಜಟಾಪಟಿಯ ಜಸ್ಟ್‌ ಪ್ರೋಮೋ.

ದಿನದಿಂದ ದಿನಕ್ಕೆ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಟ್ವಿಸ್ಟ್ ಪಡೆದುಕೊಳ್ತಿದೆ.. ಇಂದಿನ ಎಪಿಸೋಡ್‌ನ ಪ್ರೋಮೋ ಔಟ್‌ ಆಗಿದೆ.. 13ನೇ ವಾರಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್‌ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿರುವ ಸ್ಪರ್ಧಿ ಯಾರು ಅನ್ನೋದನ್ನ ಸೂಚಿಸಿಬೇಕಿದೆ.. ಜಸ್ಟ್‌ ಯಾರು ಅಂತಾ ಹೇಳೋದಲ್ಲ. ಮುಖಕ್ಕೆ ನೀರು ಎರಚಿ ಹೇಳಬೇಕಿದೆ.. ಈ ಟಾಸ್ಕ್‌ಗಾಗಿ ನೀಡಿರುವ ರೀಸನ್‌ ಐಶ್ವರ್ಯಾ ಮತ್ತು ಚೈತ್ರಾ ನಡುವೆ ದೊಡ್ಡ ಮಟ್ಟದ ಕಲಹವೇ ಸೃಷ್ಟಿಸಿದೆ.. ಅಷ್ಟೇ ಸಲ್ಲ ಉಗ್ರಂ ಮಂಜು ಮೇಲೆ ಗೌತಮಿ ಕಂಪ್ಲೇಂಟ್‌ ಮುಂದುವರೆದಿದೆ.

ನಿಮ್ಮ ಆಟಕ್ಕೆ ಈ ವಾರ ನಾನು ಬಲಿಪಶುವಾದೆ.. ಸುಳ್ಳು ಹೇಳ್ತಾ ಇದ್ದೀರಾ ಹೇಯ್‌. ಬಾಯಿ ಮುಚ್ಚೇ ಸಾಕು, ಎಷ್ಟ್ರರೀ ಮಾತನಾಡ್ತೀರಾ ಅಂತಾ ಐಶ್ವರ್ಯಾ ಅವರು, ಚೈತ್ರಾ ಮೇಲೆ ಮುಗಿಬಿದ್ದಿದ್ದಾರೆ.. ಇನ್ನೂ ಐಶ್ವರ್ಯಾ ಎಷ್ಟೇಲ್ಲಾ ಮಾತನಾಡ್ತಿದ್ರೆ ಚೈತ್ರಾ ಸುಮ್ನೆ ಇರ್ತಾರಾ, ಟಾರ್ಗೆಟ್‌ ನಾಮಿನೇಷನ್‌ ಅನ್ನೋದು ಐಶ್ವರ್ಯಾ ಅವರೇ ಹೇಳಿದ್ದಾರೆ ಅಂತಾ ಗುಡುಗಿದ್ದಾರೆ.. ಇದಕ್ಕೆ ಕೌಂಟರ್‌ ಕೊಟ್ಟಿರುವ ಐಶ್ವರ್ಯಾ,, ಸುಳ್ಳು ಹೇಳ್ತಾ ಇದ್ದೀರಾ.. ಹೇಯ್‌ ಅಂತಾ ಏರುಧ್ವನಿಯಲ್ಲಿಯೇ ಕೆಣಕಿದ್ದಾರೆ.. ಹೇಯ್‌.. ಅನ್ನೋದಕ್ಕೆ ನೀನ್ಯಾವಳೇ, ಬಾಯಿ ಮುಚ್ಚು-ಗೀಮುಚ್ಚು ಅಂದ್ರೆ ನಾನು ಸುಮ್ಮನೆ ಇರೋದಿಲ್ಲ.. ಮುಚ್ಕಂಡು ಇರು ನೀನು ಅಂತಾ ಟೇಬಲ್‌ ಕುಟ್ಟಿದ್ದಾರೆ..

ಬಿಗ್‌ಬಾಸ್‌ ಮನೆಯಲ್ಲಿ ಮತ್ತೊಂದೆಡೆ ಉಗ್ರಂ ಮಂಜು ಮೇಲೆ ಗೌತಮಿ ಕಂಪ್ಲೇಂಟ್‌ ಮುಂದುವರೆದಿದೆ.. ಗೌತಮಿ ಇದ್ದಾಗ ಮಂಜು ಮಾತನಾಡೋದಿಲ್ಲ.. ಗೌತಮಿಗೆ ಹೆದರುತ್ತಾರೆ ಅನ್ನೋ ಮಾತುಗಳೇ ಕೇಳಿ ಬರುತ್ತೆ.. ಈಗಲಾದ್ರೂ ಎಚ್ಚೆತ್ತುಕೊಳ್ಳಿ ಅಂತಾ ಮಂಜು ಮುಖಕ್ಕೆ ಗೌತಮಿ ನೀರೆರಚಿದ್ದಾರೆ.. ಮತ್ತೊಂದೆಡೆ ಹನುಮಂತಗೆ ಧನರಾಜ್‌, ಗೌತಮಿಗೆ ರಜತ್‌, ಚೈತ್ರಾಗೆ ಮಂಜು, ಐಶ್ವರ್ಯಾಗೆ ಭವ್ಯಾ ಸೇರಿ ಮೋಕ್ಷಿತಾ ಮುಖಕ್ಕೆ ನೀರೆರಚಲಾಗಿದ್ದು, ಇಂದಿನ ಎಪಿಸೋಡ್‌ನ ಪ್ರೋಮೋ ವೀಕ್ಷಕರಿಗೆ ಕುತೂಹಲ ಹೆಚ್ಚಿಸಿದೆ..