ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ದರ್ಶನ್ ಸದ್ಯ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ.. ಬೆನ್ನುನೋವು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್ ಡಿಸ್ಚಾರ್ಜ್ ಬಳಿಕ ಬೆಂಗಳೂರಿನಲ್ಲಿರದೇ ಮೈಸೂರು ಸೇರಿದ್ದಾರೆ. ಆರೋಪಿಗೆ ರೆಗ್ಯುಲರ್ ಬೇಲ್ ಮಂಜೂರಾಗಿದ್ದರೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.. ದರ್ಶನ್ ಯಾರೆನ್ನೆಲ್ಲಾ ಭೇಟಿಯಾಗ್ತಾರೆ, ಆರೋಪಿಯನ್ನ ಯಾರೆಲ್ಲಾ ಮೀಟ್ ಆಗ್ತಾರೆ ಅಂತಾ ಪೊಲೀಸರು ವಾಚ್ ಮಾಡುತ್ತಿದ್ದಾರೆ.
ಕೊಲೆ ಕೇಸ್ ಸಂಬಂಧ ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗುತ್ತಿದೆಯಾ? ಮೃತ ರೇಣುಕಾಸ್ವಾಮಿ ಕುಟುಂಬಕ್ಕೂ ಏನಾದ್ರೂ ಅಪಾಯ ಇದ್ಯಾ ಅಂತಾ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.. ದರ್ಶನ್ ಸೇರಿ ಆರೋಪಿಗಳು ಜಾಮೀನು ಪಡೆದು ಆಚೆ ಬಂದಿರುವ ಹಿನ್ನೆಲೆ ಪೊಲೀಸರು ಎಚ್ಚರಿಕೆ ಹೆಜ್ಜೆ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ಜಮೀನು ರದ್ದು ಸಂಬಂಧ ಮೇಲ್ಮನವಿ ಸಲ್ಲಿಸಲು ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಗೃಹ ಇಲಾಖೆಗೆ ಅನುಮತಿ ಕೋರಿ ತನಿಖಾಧಿಕಾರಿಗಳು ಪತ್ರ ಬರೆದಿದ್ದಾರೆ. ಬಹುತೇಕ ಮುಂದಿನ ವಾರವೇ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.