ದೇಶ

ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಸಮರ್ಥ ಯುವ ನಾಯಕ ಯಾರು ಗೊತ್ತಾ?

ದೇಶದಲ್ಲಿ ಅನೇಕ ಸಮರ್ಥ ಯುವ ರಾಜಕಾರಣಿಗಳಿದ್ದಾರೆ. ಅವರ ಬಗ್ಗೆ ನನಗೂ ವೈಯಕ್ತಿಕವಾಗಿ ಗೊತ್ತಿದೆ. ಆದರೆ ಇಲ್ಲಿ ನಾನು ಒಬ್ಬರ ಹೆಸರು ಹೇಳುವುದರಿಂದ, ಇದೇ ದಾರಿಯಲ್ಲಿ ಸಾಗುತ್ತಿರುವ ಇತರರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ನಾನು ಯಾರ ಹೆಸರನ್ನೂ ಉಲ್ಲೇಖಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನವದೆಹಲಿ; ಇಂದಿನ ಯುವರಾಜಕಾರಣಿಗಳಲ್ಲಿ ಮೋದಿ ಮೆಚ್ಚಿದ ಯುವ ನಾಯಕ ಯಾರು? ಈ ಪ್ರಶ್ನೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ದೇಶದಲ್ಲಿ ಯುವ ನಾಯಕರು ಹಲವರಿದ್ದಾರೆ. ಅದು ಕಾಂಗ್ರೆಸ್‌, ಬಿಜೆಪಿ, ಆಪ್..‌ ಹೀಗಿ ಎಲ್ಲಾ ಪಕ್ಷಗಳಲ್ಲಿಯೂ ದೇಶವನ್ನ ಮುನ್ನಡೆಸಬಲ್ಲ ಉತ್ತಮ ಯುವ ಪೀಳಿಗೆಯೇ ಇದೆ. 

ಹೌದು, ಈ ದೇಶವನ್ನ ಮುನ್ನಡೆಸುವ ಮೋದಿ ಮೆಚ್ಚಿದ ಸಮರ್ಥ ಯುವ ನಾಯಕ ಯಾರೆಂಬ ಪ್ರಶ್ನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರವನ್ನ ನೀಡಿದ್ದಾರೆ. ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗಿನ ತಮ್ಮ ಮೊಟ್ಟಮೊದಲ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಿಂತ ದೇಶದ ಅಭಿವೃದ್ಧಿಗಾಗಿ ದುಡಿಯುವ ಯುವ ರಾಜಕಾರಣಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗಾಗಿ ನಾನು ಮಾರ್ಗದರ್ಶನ ಮಾಡಲೂ ಸಿದ್ಧನಿದ್ದೇನೆ. ಆಡಳಿತದ ವಿಷಯದಲ್ಲಿ ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ಯುವ ರಾಜಕಾರಣಿಗಳ ದೊಡ್ಡ ಪಡೆಯೇ ಇದೆ.." "ನಾನು ಯಾವುದೇ ಒಬ್ಬ ರಾಜಕಾರಣಿಯ ಹೆಸರು ಹೇಳಲು ಇಚ್ಛಿಸುವುದಿಲ್ಲ, ಏಕೆಂದರೆ ಇದರಿಂದ ಇತರರಿಗೆ ಅನ್ಯಾಯ ಮಾಡಿದಂತಾಗುತ್ತದೆ.." ಎಂದುರು.

ಜೊತೆಗೆ ದೇಶದಲ್ಲಿ ಅನೇಕ ಸಮರ್ಥ ಯುವ ರಾಜಕಾರಣಿಗಳಿದ್ದಾರೆ. ಅವರ ಬಗ್ಗೆ ನನಗೂ ವೈಯಕ್ತಿಕವಾಗಿ ಗೊತ್ತಿದೆ. ಆದರೆ ಇಲ್ಲಿ ನಾನು ಒಬ್ಬರ ಹೆಸರು ಹೇಳುವುದರಿಂದ, ಇದೇ ದಾರಿಯಲ್ಲಿ ಸಾಗುತ್ತಿರುವ ಇತರರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ನಾನು ಯಾರ ಹೆಸರನ್ನೂ ಉಲ್ಲೇಖಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.