ಕರ್ನಾಟಕ

ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ತಾಯಿ-ಮಗು ಸಾ*..!

ಕೌಟುಂಬಿಕ ಕಲಹ ಹಿನ್ನೆಲೆ ಮನನೊಂದ ಗೃಹಿಣಿ ಮಗುವಿಗೆ ನೇಣು ಬಿಗಿದು, ತಾನೂ ನೇಣಿಗೆ ಶರಣಾಗಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆ ಮನನೊಂದ ಗೃಹಿಣಿ ಮಗುವಿಗೆ ನೇಣು ಬಿಗಿದು, ತಾನೂ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಶಿಲ್ಪ(30) ಹಾಗೂ ದೀಕ್ಷಿತ್(4) ಎಂಬ ಕಂದಮ್ಮ ಎನ್ನಲಾಗಿದೆ. ಅದೃಷ್ಟವಶಾತ್‌ ಮತ್ತೊಂದು ಮಗು ಪ್ರಾಣಾಪಾಯದಿಂದ ಪಾರಾಗಿದೆ. 

ಒಂದೇ ಹಗ್ಗಕ್ಕೆ ತನ್ನ ಇಬ್ಬರೂ ಮಕ್ಕಳನ್ನು ಬಿಗಿದು, ಅದೇ ಹಗ್ಗಕ್ಕೆ ತಾಯಿ ಕೂಡ ನೇಣಿಗೆ ಶರಣಾಗಿದ್ದರು. ಅದೃಷ್ಟವಶಾತ್‌ ಮಗು ಹಗ್ಗದಿಂದ ಕೆಳಗೆ ಬಿದ್ದಿದ್ದು, ಮಗು ಅಳುವ ಶಬ್ದ ಕೇಳಿ ಸ್ಥಳೀಯರು ಓಡೋಡಿ ಬಂದು ರಕ್ಷಿಸಿದ್ದಾರೆ. ಗಂಡ ಪುಟ್ಟಸ್ವಾಮಿ ಜಮೀನಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ವಾರದ ಹಿಂದೆ ಶಿಲ್ಪಾ ಅನೈತಿಕ ಸಂಬಂಧವಾಗಿ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಈ ಸಂಬಂಧ ರಾಜೀ ಪಂಚಾಯತಿ ಕೂಡ ನಡೆದಿತ್ತು. ಅದರ ಬೆನ್ನಲ್ಲೇ ಮಗುವಿನ ಜೊತೆ ಶಿಲ್ಪಾ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಿಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.