ಕರ್ನಾಟಕ

ಡಿಸಿಎಂ ಡಿಕೆ ಶಿವಕುಮಾರ್‌ ಶತ್ರು ಸಂಹಾರ ಯಾಗ ಮಾಡಿಸಿದ್ದು ಯಾರ ವಿರುದ್ಧ..?

ಮುಖ್ಯಮಂತ್ರಿಯಾಗುವ ಪ್ರಯತ್ನದಲ್ಲಿರುವ ಡಿಕೆ ಶಿವಕುಮಾರ್‌ಗೆ ರಾಜ್ಯ ಕಾಂಗ್ರೆಸ್‌ನ ಕೆಲ ಶಾಸಕರು ಸಚಿವರ ವಿಭಿನ್ನ ಹೇಳಿಕೆಗಳಿಂದ ಅಸಮಾಧಾನ ಉಂಟಾಗಿದೆ. ಜೊತೆಗೆ ವಿಪಕ್ಷಗಳ ನಾಯಕರುಗಳಿಂಲೂ ಅಡ್ಡಿ-ಆತಂಕಗಳು ಉಂಟಾಗಿರುವ ಹಿನ್ನೆಲೆ ಡಿಕೆ ಶಿವಕುಮಾರ್‌ ದೇವರ ಮೊರೆ ಹೋಗಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಬಗ್ಗೆ ಸದಾ ಸುದ್ದಿ ಆಗುತ್ತೆ. ಅವರ ರಾಜಕೀಯ ನಡೆ ನುಡಿ ಹಾಗೂ ಅವರ ಧೈವ ಭಕ್ತಿ ಬಗ್ಗೆ. ಈಗಲೂ ಅಂತಹದ್ದೇ ಸುದ್ದಿ ಜೋರಾಗಿ ಆಗ್ತಿದೆ. ಕಳೆದ ಮೂರು ದಿನಗಳಿಂದ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಸಾಲು ಸಾಲು ದೇವಸ್ಥಾನಗಳಿಗೆ ಭೇಟಿ ಮಾಡಿ ಪೂಜೆ ಹಾಗೂ ಹೋಮ ಹವನ ಮಾಡಿಸುತ್ತಿದ್ದಾರೆ. ಮೊನ್ನೆ ತಮಿಳು ನಾಡಿನ ಮಹಾ ಪ್ರತ್ಯಂಗಿರ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಹೋಮ ಹವನ ಮಾಡಿಸಿದ್ದಾರೆ. ಪೆರಮಾಳ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಮಲ್ಲೇಶ್ವರಂನ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಇಂದು ಶೃಂಗೇರಿ ಶಾರದಾಂಭೆ ಮೊರೆ ಹೋಗಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.ಮಾರ್ಚ್ ಬಳಿಕ ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಲ್ಲಿ ಗುಸುಗುಸು ಚರ್ಚೆ ಶುರುವಾಗಿದೆ. ಈ ನಡುವೆ ಸಿಎಂ ರೇಸ್ ಗೆ ಒಬ್ಬರೊಬ್ಬರೇ ಎಂಟ್ರಿ ಕೊಡ್ತಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಪೂರ್ಣವಾಧಿ ಸಿಎಂ ಅನ್ನೋ ಕೂಗು ಸಹ ಶುರುವಾಗಿದೆ ಹೀಗಾಗಿ ಶತ್ರು ಭಾದೆ ತೊಲಗಲಿ ಅನ್ನೋ ರೀತಿಯಲ್ಲಿ ಟೆಂಪಲ್ ರನ್ ಮಾಡ್ತಿದ್ದಾರೆ