ಕಳೆದ ಮೂರು ದಿನಗಳಿಂದ ಡಿಕೆಶಿ ಟೆಂಪಲ್ ರನ್ ಶುರು ಮಾಡಿದ್ದಾರೆ. ಇಂದು ಶೃಂಗೇರಿ ಶಾರದಾಂಬಾ ಮಠಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಮೊನ್ನೆ ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದ ಡಿಕೆಶಿ, ನಿನ್ನೆ ಮಲ್ಲೇಶ್ವರಂನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಇಂದು ಶೃಂಗೇರಿ ಶಾರದಾಂಭೆಯ ದರ್ಶನವನ್ನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇನ್ನೂ ಮುಖ್ಯಮಂತ್ರಿಯಾಗುವ ಪ್ರಯತ್ನದಲ್ಲಿರುವ ಡಿಕೆ ಶಿವಕುಮಾರ್‌ಗೆ ರಾಜ್ಯ ಕಾಂಗ್ರೆಸ್‌ನ ಕೆಲ ಶಾಸಕರು ಸಚಿವರ ವಿಭಿನ್ನ ಹೇಳಿಕೆಗಳಿಂದ ಅಸಮಾಧಾನ ಉಂಟಾಗಿದೆ. ಜೊತೆಗೆ ವಿಪಕ್ಷಗಳ ನಾಯಕರುಗಳಿಂಲೂ ಅಡ್ಡಿ-ಆತಂಕಗಳು ಉಂಟಾಗಿರುವ ಹಿನ್ನೆಲೆ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ.