ಉತ್ತರ ಪ್ರದೇಶ : ಅಯೋಧ್ಯಾ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಇಂದಿನಿಂದ ಆರಂಭವಾಗಿದೆ. ರಾಮಮಂದಿರದಲ್ಲಿ ಬಾಲರಾಮನ ಮೂರ್ತಿಗೆ ಅಭಿಷೇಕ ಮಾಡುವ ಮೂಲಕ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಿದ್ದಾರೆ. ಬಾಲರಾಮನಿಗೆ ಮಹಾ ಮಂಗಳಾರತಿ ಮಾಡಿ, 56 ಬಗೆಬಗೆ ವಿಷೇಶ ತಿಂಡಿ-ತಿನಿಸುಗಳನ್ನ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಿದ್ದಾರೆ.
ಜನವರಿ 11ರಿಂದ 13ರವರೆಗೆ ಕಾರ್ಯಕ್ರಮ ನಡೆಯಲಿದ್ದು, ರಾಮಮಂದಿರದತ್ತ ಭಕ್ತಸಾಗರವೇ ಹರಿದು ಬರುತ್ತಿದೆ. ಇನ್ನೂ ಮುಂಜಾಗೃತ ಕ್ರಮವಾಗಿ ರಾಮಮಂದಿರದ ಸುತ್ತಾಮುತ್ತಾ ಬಿಗಿ ಭದ್ರತೆ ಒದಗಿಸಲಾಗಿದ್ದು, ಪೊಲೀಸರ ಕಣ್ಗಾವಲನ್ನ ಒದಗಿಸಲಾಗಿದೆ.
ಇನ್ನೂ ರಾಮಲಲ್ಲಾ ದರ್ಶನಕ್ಕೆ ಬರುವ ಭಕ್ತರಿಗಾಗಿ ನೀರು, ವಾಸ್ತವ್ಯ ಟೆಂಟ್‌ಗಳು, ಊಟದ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ ಎಂದು ರಾಮಮಂದಿರ ಟ್ರಸ್ಟ್ ತಿಳಿಸಿದೆ.