ದೇಶ

ನಕಲಿ ಸಿಗರೇಟ್ ಸರಬರಾಜು ಮಾಡ್ತಿದ್ದ ಕೇರಳ ಗ್ಯಾಂಗ್ ಅಂದರ್

ಪ್ರತಿಷ್ಟಿತ ಸಿಗರೇಟ್ ಬ್ರಾಂಡ್ ನಕಲು ಮಾಡಿ ಕಾಂಬೋಡಿಯಾ, ಬಾಂಗ್ಲಾದೇಶ ಮೂಲಕ ನಕಲಿ ಸಿಗರೇಟ್ಸ್ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.

ಬೆಂಗಳೂರಿಗೆ ನಕಲಿ ಸಿಗರೇಟ್ ಸರಬರಾಜು ಮಾಡ್ತಿದ್ದ ಕೇರಳ ಗ್ಯಾಂಗ್ ವೊಂದನ್ನ ಅರೆಸ್ಟ್‌ ಮಾಡಲಾಗಿದೆ. ITCಯ ಲೈಟ್ಸ್ ಬ್ರಾಂಡ್‌ನ ಲಕ್ಷಾಂತರ ರೂ. ಮೌಲ್ಯದ  ಮೂರು ಬಾಕ್ಸ್ ನಕಲಿ ಸಿಗರೇಟ್ ಸೀಜ್ ಮಾಡಲಾಗಿದೆ. 

ಪ್ರತಿಷ್ಟಿತ ಸಿಗರೇಟ್ ಬ್ರಾಂಡ್ ನಕಲು ಮಾಡಿ ಕಾಂಬೋಡಿಯಾ, ಬಾಂಗ್ಲಾದೇಶ ಮೂಲಕ ನಕಲಿ ಸಿಗರೇಟ್ಸ್ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಕೆಎಸ್ ಲೇಔಟ್ ಪೊಲೀಸರು ನಿಶಾಂತ್, ಶಕೀಲ್ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿದ್ದು, ತಲೆಮರೆಸಿಕೊಂಡಿರುವ  ಶಬ್ಬೀರ್‌ಗಾಗಿ ಬಲೆ ಬೀಸಿದ್ದಾರೆ.