ಚಿಕ್ಕಬಳ್ಳಾಪುರ : ಕಾರಿನ ಮೇಲೆ ಟೊಮ್ಯಾಟೊ ಲಾರಿ ಉರುಳಿ ಬಿದ್ದ ಘಟನೆಯೊಂದು ಚಿತ್ತೂರು ತಿರುಪತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳಿ ನಡೆದಿದೆ. ಪರಿಣಾಮ ಸ್ಥಳದಲ್ಲೆ ಮೂವರ ದುರ್ಮರಣ ಹೊಂದಿದ್ದಾರೆ. ಕಾರು ಚಾಲಕ ರಮೇಶ್, ಮಂಜುನಾಥ್, ಮುನಿವೆಂಕಟರೆಡ್ಡಿ ಮೃತ ದುರ್ದೈವಿಗಳಾಗಿದ್ದಾರೆ.
ಹೌದು, ರಸ್ತೆ ಬದಿಯಲ್ಲಿದ್ದ ಕಾರಿನ ಮೇಲೆ ಲಾರಿ ಉರುಳಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ತೇಜಸ್ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದು, ಆದರೆ ಲಾರಿ ಬಿದ್ದ ರಭಸಕ್ಕೆ ತೇಜಸ್‌ಗೂ ಗಾಯವಾಗಿದ್ದು, ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದೆ.