ಕರ್ನಾಟಕ

ಮ್ಯಾಕ್ಸ್‌ ಟ್ರೈಲರ್‌ ರಿಲೀಸ್...ಹೇಗಿದೆ ಗೊತ್ತಾ ಕಿಚ್ಚನ ಲುಕ್‌, ಸ್ಟೈಲ್..?

ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಟ್ರೈಲರ್‌ ರಿಲೀಸ್‌ ಆಗಿದ್ದು, ಸುದೀಪ್‌ ಆಕ್ಷನ್‌, ಡೈಲಾಗ್ ಹಾಗೂ ಲುಕ್‌ಗೆ ಫ್ಯಾನ್ಸ್‌ ಅಂತೂ ಫುಲ್‌ ಫಿದಾ ಆಗಿದ್ದಾರೆ.

ಇದೇ ಡಿಸೆಂಬರ್‌ 25ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ಮ್ಯಾಕ್ಸ್‌ ಚಿತ್ರ ರಿಲೀಸ್‌ ಆಗಲಿದ್ದು, ಈಗಾಗ್ಲೇ ರಿಲೀಸ್‌ ಆಗಿರುವ ಮ್ಯಾಕ್ಸ್‌ ಟ್ರೈಲರ್‌ ಸಖತ್‌ ಸೌಂಡ್‌ ಮಾಡ್ತಿದೆ. ಕನ್ನಡ, ತಮಿಳು ಹಾಗೂ ಹಿಂದಿ  ಭಾಷೆಯಲ್ಲಿ ಟ್ರೈಲರ್‌ ರಿಲೀಸ್‌ ಆಗಿದ್ದು, ಸುದೀಪ್‌ ಆಕ್ಷನ್‌, ಡೈಲಾಗ್ ಹಾಗೂ ಲುಕ್‌ಗೆ ಫ್ಯಾನ್ಸ್‌ ಅಂತೂ ಫುಲ್‌ ಫಿದಾ ಆಗಿದ್ದಾರೆ. 

ಮ್ಯಾಕ್ಸ್‌ ನಲ್ಲಿ ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುನಿಲ್, ಪ್ರಮೋದ್ ಶೆಟ್ಟಿ, ವರಲಕ್ಷ್ಮಿ ಶರತ್ ಕುಮಾರ್, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು ಹೀಗೆ ಬಹುದೊಡ್ಡ ತಾರಾಗಣವಿದೆ. ಕಾಲಿವುಡ್‌ ನಿರ್ಮಾಪಕ ಕಲೈಪುಲಿ ಎಸ್. ಧಾನು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ, ವಿಜಯ್ ಕಾರ್ತಿಕೇಯ ಆಕ್ಷನ್‌ ಕಟ್ ಹೇಳಿದ್ದಾರೆ. ಅಜನೀಶ್‌ ಬಿ.ಲೋಕನಾಥ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.