ಕರ್ನಾಟಕ

ʼಕೈʼ ಪಾಳಯದಲ್ಲಿ ಜೋರಾಯ್ತು ಪವರ್‌ ಪಾಲಿಟಿಕ್ಸ್;‌ ರಾಜಣ್ಣ ವಿರುದ್ಧ ಡಿಕೆಶಿ ಟೀಂ ಗರಂ

ರಾಜಣ್ಣ ಹೇಳಿಕೆಯನ್ನ ಖಂಡಿಸಬೇಕು ಎಂದು ಈ ಬಗ್ಗೆ ಡಿಕೆಶಿ ಟೀ ಹೈಕಮಾಂಡ್‌ ಗಮನಕ್ಕೂ ತಂದಿದೆ. ರಾಜ್ಯಣ್ಣ ನಡೆಯ ಬಗ್ಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಗಮನಕ್ಕೆ ಈಗಾಗಲೇ ತರಲಾಗಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಚರಿಕೆ ಕೊಡುವ ಭರವಸೆಯನ್ನ ಸುರ್ಜೇವಾಲಾ ನೀಡಿದ್ದಾರೆ.

ಸಚಿವ ರಾಜಣ್ಣ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಬಣ ಫುಲ್ ಗರಂ‌ ಆಗಿದೆ.  ಸಿಎಂ ಬದಲಾವಣೆ ವಿಚಾರದ ಬಗ್ಗೆ ರಾಜಣ್ಣ ಪದೇಪದೇ ಚರ್ಚೆ ಮಾಡ್ತಾರೆ. ಸಿದ್ದರಾಮಯ್ಯ ಐದು ವರ್ಷಗಳ ಕಾಲ ಸಿಎಂ ಅನ್ನುತ್ತಾರೆ. ಹಾಗಾಗಿ ಪಕ್ಷದಲ್ಲಿ ಭಾರಿ ಭಿನ್ನಾಭಿಪ್ರಾಯಗಳು ಬರುವುದಕ್ಕೆ ಮೂಲ ಕಾರಣವೇ ರಾಜಣ್ಣ  ಎಂದು ಹರಿಹಾಯ್ದಿದ್ದಾರೆ. 

ಮುಂದಿನ ವಾರ ಕರೆದಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜಣ್ಣ ಗೆ ಬ್ರೇಕ್ ಹಾಕಬೇಕು. ರಾಜಣ್ಣ ಹೇಳಿಕೆಯನ್ನ ಖಂಡಿಸಬೇಕು ಎಂದು ಈ ಬಗ್ಗೆ ಡಿಕೆಶಿ ಟೀ ಹೈಕಮಾಂಡ್‌ ಗಮನಕ್ಕೂ ತಂದಿದೆ. ರಾಜ್ಯಣ್ಣ ನಡೆಯ ಬಗ್ಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಗಮನಕ್ಕೆ ಈಗಾಗಲೇ ತರಲಾಗಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಚರಿಕೆ ಕೊಡುವ ಭರವಸೆಯನ್ನ ಸುರ್ಜೇವಾಲಾ ನೀಡಿದ್ದಾರೆ. 

ಹಾಗಾಗಿ ರಾಜಣ್ಣ ಹೇಳಿಕೆಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಬ್ರೇಕ್‌ ಬೀಳುತ್ತಾ? ಅಥವಾ ಈ ಹಿಂದೆಯೂ ಹಲವು ಬಾರಿ ಎಚ್ಚಕೆ ಕೊಟ್ಟಿದ್ರೂ ಡೋಂಟ್‌ ಕೇರ್‌ ಎಂದಿದ್ದ ರಾಜಣ್ಣ ಈ  ಬಾರಿ ಸೈಲೆಂಟ್‌ ಆಗ್ತಾರಾ? ಕಾದುನೋಡಬೇಕಿದೆ.