ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು ವಿಧಿವಶರಾಗಿದ್ದು, ಇಂದು ಹುಟ್ಟೂರಿನಲ್ಲಿ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಹೆದ್ದಾರಿ ಪಕ್ಕದಲ್ಲಿರುವ, ಕಾಫಿಡೇ ಹತ್ತಿರ ಅಂತ್ಯಕ್ರಿಯೆ ನಡೆಯಲಿದೆ.
ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಪುತ್ರ ಹಾಗೂ ಎಸ್.ಎಂ.ಕೃಷ್ಣ ಅವರ ಮೊಮ್ಮಗನಾದ ಅಮರ್ಥ್ಯ ಹೆಗ್ಡೆಯಿಂದ ಚಿತೆಗೆ ಅಗ್ನಿ ಸ್ಪರ್ಶವಾಗಲಿದೆ. ಒಕ್ಕಲಿಗ ಸಂಪ್ರದಾಯ ಪ್ರಕಾರ ಭಾನುಪ್ರಕಾಶ ನೇತೃತ್ವದಲ್ಲಿ 15 ವೈದಿಕರ ತಂಡದಿಂದ ಅಂತ್ಯಕ್ರೀಯೆಯ ವಿಧಿ ವಿಧಾನ ಕಾರ್ಯ ನೇರವೇರಲಿದೆ.. ಸೋಮನಹಳ್ಳಿ ಗ್ರಾಮದಲ್ಲಿ ಬೆಳ್ಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ..
ಬೆಂಗಳೂರಿನಿಂದ ಮದ್ದೂರಿನ ಸೋಮನಹಳ್ಳಿಗೆ ಪಾರ್ಥಿವ ಶರೀರ ಮೆರವಣಿಗೆ ಮೂಲಕ, ಅವರ ಹುಟ್ಟೂರು ತಲುಪಲಿದ್ದು, ಬೆಳಿಗ್ಗೆ 11 ಗಂಟೆ ವೇಳೆಗೆ ಸ್ವಗ್ರಾಮಕ್ಕೆ ಅಗಮಿಸುವ ಸಾಧ್ಯತೆಯಿದೆ. ಬೆಂಗಳೂರು-ಸೋಮನಹಳ್ಳಿ ಮಾರ್ಗ ಮಧ್ಯೆ ಬರುವ ಪ್ರಮುಖ ತಾಲೂಕು ಕೇಂದ್ರಗಳಗಲ್ಲಿ 5 ನಿಮಿಷ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 3 ಗಂಟೆ ಬಳಿಕ ಧಾರ್ಮಿಕ ವಿಧಿವಿಧಾನ ನೆರವೇರಲಿದ್ದು, ಇಂದು ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಸಿಎಂ ಸೇರಿ ಸಚಿವ ಸಂಪುಟದ ಹಲವು ಸಚಿವರು, ರಾಜಕೀಯ ಗಣ್ಯರು, ಮಠಾಧೀಶರು ಭಾಗಿಯಾಗಲಿದ್ದಾರೆ. ಎಸ್.ಎಂ.ಕೆ ಅವರ ಅಂತ್ಯಕ್ರಿಯೆ ಅಂಗವಾಗಿ ಇಂದು ಮದ್ದೂರು ಪಟ್ಟಣ ಬಂದ್ ಮಾಡಿ ಗೌರವ ಸಮರ್ಪಣೆ ಮಾಡಲಾಗಿದೆ. ಈಗಾಗಲೇ ಬಂದ್ ಗೆ ಬೆಂಬಲಿಸುವಂತೆ ಪ್ರಗತಿಪರ ಸಂಘಟನೆಗಳಿಂದ ಆಟೋದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.