ಕರ್ನಾಟಕ

ಕಾಡಿನೊಳಗೆ ಪತ್ತೆಯಾದವು ನಕ್ಸಲರು ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು..!

ಚಿಕ್ಕಮಗಳೂರು ಜಿಲ್ಲೆಯ ಜಯಪುರ ಸಮೀಪದ ಕಿತ್ತಲೇಗಂಡಿ ಕಾಡಿನಲ್ಲಿ ಮಣ್ಣಿನೊಳಗೆ ಹೂತಿಟ್ಟಿದ್ದ 5 ಗನ್​ಗಳು, ಎಕೆ 47, 303ಕೋವಿ, ಒಂದು ಪಿಸ್ತೂಲ್​ ಮತ್ತು 100ಕ್ಕೂ ಹೆಚ್ಚು ಗುಂಡುಗಳು ಪತ್ತೆಯಾಗಿವೆ. ಆದರೆ ಪತ್ತೆಯಾಗಿರುವ ಶಸ್ತ್ರಸ್ತ್ರಗಳು ನಕ್ಸಲರದ್ದೇನಾ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ.

ಚಿಕ್ಕಮಗಳೂರು : ಎರಡು ದಶಕದಿಂದ ಪಶ್ಚಿಮ ಘಟ್ಟಗಳಲ್ಲಿ ಅಡಗಿದ್ದ 6 ಮಂದಿ ನಕ್ಸಲರು ಸರ್ಕಾರದ ಮುಂದೆ ಶರಣಾಗಿದ್ದಾರೆ. ಈ ಮಧ್ಯೆ ಶರಣಾದ ನಕ್ಸಲರು ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. 

ಚಿಕ್ಕಮಗಳೂರು ಜಿಲ್ಲೆಯ ಜಯಪುರ ಸಮೀಪದ ಕಿತ್ತಲೇಗಂಡಿ ಕಾಡಿನಲ್ಲಿ ಮಣ್ಣಿನೊಳಗೆ ಹೂತಿಟ್ಟಿದ್ದ 5 ಗನ್‌ಗಳು, ಎಕೆ 47, 303ಕೋವಿ, ಒಂದು ಪಿಸ್ತೂಲ್ ಮತ್ತು 100ಕ್ಕೂ ಹೆಚ್ಚು ಗುಂಡುಗಳು ಪತ್ತೆಯಾಗಿವೆ. ಆದರೆ ಪತ್ತೆಯಾಗಿರುವ ಶಸ್ತ್ರಸ್ತ್ರಗಳು ನಕ್ಸಲರದ್ದೇನಾ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. 

ಇನ್ನೂ, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಠಾಣಾ ವ್ಯಾಪ್ತಿಯಲ್ಲಿ ಗನ್ಗಳು ಪತ್ತೆಯಾಗಿರುವ ಹಿನ್ನೆಲೆ ಆಯುಧ ಆ್ಯಕ್ಟ್ನ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಶರಣಾಗಿರುವ 6ಮಂದಿ ನಕ್ಸಲರನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಜನವರಿ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.