ಕರ್ನಾಟಕ

ಜಗಳ ಮಾಡಿಕೊಂಡು ತವರಿಗೆ ಹೋದ ಪತ್ನಿ..ಪತಿ ನೇಣಿಗೆ ಶರಣು..!

ಪತ್ನಿ ತವರು ಸೇರಿದ್ದಕ್ಕೆ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.

ಪತ್ನಿ ತವರು ಸೇರಿದ್ದಕ್ಕೆ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ನಾಗೇಶ್‌ (26) ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕೆ ತವರು ಸೇರಿದ್ದ ನಾಗೇಶ್‌ ಪತ್ನಿ ಜ್ಯೋತಿ, ಎಷ್ಟೇ ಕರೆ ಮಾಡಿದರೂ  ಮನೆಗೆ ಬಂದಿರಲಿಲ್ಲ. ಇದೇ ಕಾರಣಕ್ಕೆ ನಾಗೇಶ್‌ ಮನೆಯ ರೂಂನಲ್ಲಿ ನೇಣಿಗೆ ಶರಣಾಗಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.