ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಚುನಾವಣೆ ಹಿನ್ನೆಲೆ ಜಾರಿಯಾದ ಫ್ರೀ ಬೀಸ್‌ಗಳು ಸೌಂಡ್ ಮಾಡುತ್ತಿವೆ.. ಕರ್ನಾಟಕದಲ್ಲಿ ಬಸ್ ಪ್ರಯಾಣದಿಂದ ಕರೆಂಟ್ ಬಿಲ್ ವರೆಗೂ ಉಚಿತ ನೀಡಲಾಗ್ತಿದೆ. ಅದೇ ರೀತಿ ಹಿಮಾಚಲ ಪ್ರದೇಶದಲ್ಲೂ ಕಾಂಗ್ರೆಸ್ ಸರ್ಕಾರ, ಜನರಿಗೆ ಫ್ರೀ ಕರೆಂಟ್ ಕೊಡ್ತಿದೆ. ಆದ್ರೆ ಹಮೀರ್‌ಪುರ ಜಿಲ್ಲೆಯ ಇಟ್ಟಿಗೆ ಉದ್ಯಮಿ, ವಿದ್ಯುತ್ ಬಿಲ್ ಕಂಡು ಶಾಕ್ ಆಗಿದ್ದಾರೆ.. ಏಕೆಂದರೆ ಒಂದು ತಿಂಗಳಿಗೆ ಬರೋಬ್ಬರಿ 210 ಕೋಟಿ ರೂಪಾಯಿ ಕರೆಂಟ್ ಬಿಲ್ ಕೊಟ್ಟಿದ್ದಾರೆ.
ಹೌದು, ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು ಅವರ ತವರು ಜಿಲ್ಲೆ ಹಮೀರ್‌ಪುರದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಟ್ಟಿಗೆ ತಯಾರಿಸುವ ಸ್ಮಾಲ್ ಸ್ಕೇಲ್ ಇಂಡಸ್ಟ್ರಿಯ ಉದ್ಯಮಿ ಲಲಿತ್ ಧಿಮಾನ್ ಎಂಬಾತನಿಗೆ ಡಿಸೆಂಬರ್ ತಿಂಗಳ ಕರೆಂಟ್ ಬಿಲ್ ಬಂದಿತ್ತು. ಪ್ರತಿ ತಿಂಗಳಂತೆ ಕರೆಂಟ್ ಬಿಲ್ ಬಂದಿದೆ ಬಿಡು ಅಂತಾ ನೋಡ್ತಿದ್ದಂತೆ ಶಾಕ್ ಎದುರಾಗಿದೆ. ಏಕಂದ್ರೆ ಬರೋಬ್ಬರಿ 210 ಕೋಟಿ ರೂಪಾಯಿ ಅಂತಾ ಕರೆಂಟ್ ಬಿಲ್ ಕೊಟ್ಟಿದ್ದಾರೆ. ಬಿಲ್ ನೋಡಿ ಗೊಂದಲಕ್ಕೊಳಗಾದ ಉದ್ಯಮಿ, ಕೂಡಲೇ ವಿದ್ಯುತ್ ಮಂಡಳಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿದ ಅಧಿಕಾರಿಗಳು ತಾಂತ್ರಿಕ ದೋಷದಿಂದ ಹೆಚ್ಚಿನ ವಿದ್ಯುತ್ ಬಿಲ್ ಬಂದಿದೆ ಎಂದು ತಿಳಿಸಿದ್ದಾರೆ. ನಂತರ ಮತ್ತೊಮ್ಮೆ ಮೀಟರ್ ಚೆಕ್ ಮಾಡಿದ್ಮೇಲೆ 210 ಕೋಟಿ ರೂಪಾಯಿ ಬಿಲ್ ಅಲ್ಲ ಜಸ್ಟ್ 4 ಸಾವಿರ ಅನ್ನೋದು ಗೊತ್ತಾಗಿದೆ. ಸಿಬ್ಬಂದಿ ಎಡವಟ್ಟಿನ ಬಗ್ಗೆ ದೂರು ಕೊಡ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಬಿಲ್ ಸರಿಪಡಿಸಿ ಅಸಲಿ ಬಿಲ್ 4 ಸಾವಿರ ರೂಪಾಯಿ ಕೊಟ್ಟಿದ್ದಾರೆ. ಹೊಸ ಬಿಲ್ ಕೈಸೇರುತ್ತಿದ್ದಂತೆ ಉದ್ಯಮಿ ಲಲಿತ್ ಧಿಮಾನ್ ನಿಟ್ಟಿಸಿರು ಬಿಟ್ಟಿದ್ದಾರೆ.