ಸ್ಯಾಂಡಲ್ ವುಡ್ ನಲ್ಲಿ ಬಹುದಿನಗಳಿಂದ ಸುದ್ದಿ ಮಾಡ್ತಿದ್ದ ಸಂಜು ವೆಡ್ಸ್ ಗೀತಾ 2 ಜನವರಿ 10 ಅಂದ್ರೆ ಇವತ್ತು ಬಿಡುಗಡೆಯಾಗಬೇಕಿತ್ತು. ಈ ದಿನ ಸಿನಿಮಾ ರಿಲೀಸ್ ಮಾಡೋಕ್ಕೆ ಭರ್ಜರಿ ತಯಾರಿ ಕೂಡ ನಡೆದಿತ್ತು. ಪ್ರಿ ರಿಲೀಸ್ ಇವೆಂಟ್ ಮಾಡಿ , ಡೇಟ್ ಕೂಡ ಅನೌನ್ಸ್ ಮಾಡಿದ್ರು.
ಆದ್ರೆ ರಿಲೀಸ್ ಗೆ ಒಂದು ದಿನ ಬಾಕಿಯಿರುವಾಗ ಯಾಕೆ ಪೋಸ್ಟ್ ಪೋನ್ ಮಾಡಿದ್ರು ಅನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿಲ್ಲವಾದ್ರೂ, ಮಾಹಿತಿ ಪ್ರಕಾರ ಹಣಕಾಸಿನ ಸಮಸ್ಯೆ ಮತ್ತು ಚಿತ್ರತಂಡದ ನಡುವಿನ ಭಿನ್ನಾಭಿಪ್ರಾಯದಿಂದ ಸಿನಿಮಾ ರಿಲೀಸ್ ಮುಂದೂಡಲಾಗಿದೆ ಅನ್ನೋ ಮಾತು ಕೇಳಿಬರ್ತಿದೆ.