ಕರ್ನಾಟಕ

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ.. ಕ್ರಿಕೆಟಿಗ ಅಶ್ವಿನ್‌ ಚಮಕ್‌ ವಿಡಿಯೋ

ಇತ್ತೀಚೆಗೆ ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್,, ಚೆನ್ನೈನ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ್ದರು. ಪದವಿ ಪ್ರದಾನ ಸಮಾರಂಭ ಹಿನ್ನೆಲೆ ಅಶ್ವಿನ್ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇದಿಕೆಗೆ ಆಗಮಿಸಿದ್ದ ಅಶ್ವಿನ್ ಭಾಷಣಕ್ಕೂ ಮುನ್ನ ಕಾರ್ಯದಲ್ಲಿದ್ದ ವೀಕ್ಷಕರಿಗೆ ಭಾಷೆ ಕುರಿತಾಗಿ ಪ್ರಶ್ನೆ ಕೇಳುತ್ತಾ ಹೋಗುತ್ತಾರೆ.

ಹಿಂದಿ ರಾಷ್ಟ್ರೀಯ ಭಾಷೆ ಎನ್ನುವವರು ಭಾರತೀಯ ಮಾಜಿ ಕ್ರಿಕೆಟರ್‌ ಆರ್‌. ಅಶ್ವಿನ್‌ ಎಸೆದಿರುವ ಗೂಗ್ಲಿಗೆ ಕಕ್ಕಾಬಿಕ್ಕಿಯಾಗಿದ್ದಾರೆ. ಆರ್‌. ಆಶ್ವಿನ್‌ ಹೇಳಿಕೆ ಕಂಡು ಅಯ್ಯಯ್ಯೋ.. ಅಯ್ಯಯ್ಯೋ ಅಂತಿದ್ದಾರೆ. ಹಿಂದಿ ಭಾಷೆಯ ಇತಿಹಾಸ ಗೊತ್ತಿಲ್ಲದೇ ʼಹಿಂದಿʼ ನ್ಯಾಷನಲ್‌ ಲ್ಯಾಂಗ್ವೇಜ್‌ ಅನ್ನೋರಿಗೆ ಚಮಕ್‌ ಕೊಟ್ಟಿರೋದು ಕಂಡು ಆರ್‌. ಅ‍ಶ್ವಿನ್‌ಗೆ ಎಲ್ಲರೂ ಶಹಬ್ಬಾಸ್‌ ಅಂತಿದ್ದಾರೆ.

ಭಾರತದ ಬಹುತೇಕ ಭಾಗಗಳಲ್ಲಿ ರಾಷ್ಟ್ರೀಯ ಹಿಂದಿ ದಿವಸವನ್ನು ಆಚರಣೆ ಮಾಡಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಉಸ್ತುವಾರಿ ಕೂಡ ವಹಿಸಿಕೊಂಡಿದೆ. ಇಂಥದ್ದಕ್ಕೆಲ್ಲಾ ದಕ್ಷಿಣ ಭಾರತದಲ್ಲಿ ಮೊದಲಿಂದಲೂ ಆಕ್ರೋಶ ಇದೆ.. ಈಗಲೂ ಹಲವು ಮಂದಿಗೆ ಹಿಂದಿ ನಮ್ಮ ಭಾರತದ ರಾಷ್ಟ್ರೀಯ ಭಾಷೆ ಎನ್ನುವ ಭ್ರಮೆಯಿದೆ. ಇಂಥಾ ಭ್ರಮೆಗಳು ಇರೋದು ಬಹುತೇಕ ವಿದ್ಯಾವಂತರ ತಲೆಯಲ್ಲಿಯೇ. ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಅನ್ನೋದಿಲ್ಲ. ಹಿಂದಿ ನ್ಯಾಷನಲ್‌ ಲ್ಯಾಂಗ್ವೇಜ್‌ ಅಲ್ಲ ಅಂತಾ ಹಲವು ವರ್ಷಗಳಿಂದ ದಕ್ಷಿಣ ಭಾರತದ ಪ್ರಾದೇಶಿಕ ಮನಸ್ಸುಗಳು ಹೇಳುತ್ತವೇ ಬಂದಿವೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ʼಹಿಂದಿʼ ನಮ್ಮ ರಾಷ್ಟ್ರೀಯ ಭಾಷೆ ಅಲ್ಲ ಎನ್ನುವ ಖಡಕ್ ಸಂದೇಶ ರವಾನಿಸಿದ್ದಾರೆ.

ಇತ್ತೀಚೆಗೆ ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್,, ಚೆನ್ನೈನ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ್ದರು. ಪದವಿ ಪ್ರದಾನ ಸಮಾರಂಭ ಹಿನ್ನೆಲೆ ಅಶ್ವಿನ್ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇದಿಕೆಗೆ ಆಗಮಿಸಿದ್ದ ಅಶ್ವಿನ್ ಭಾಷಣಕ್ಕೂ ಮುನ್ನ ಕಾರ್ಯದಲ್ಲಿದ್ದ ವೀಕ್ಷಕರಿಗೆ ಭಾಷೆ ಕುರಿತಾಗಿ ಪ್ರಶ್ನೆ ಕೇಳುತ್ತಾ ಹೋಗುತ್ತಾರೆ.

ಇಲ್ಲಿ ಎಷ್ಟು ಜನ ಇಂಗ್ಲಿಷ್ ಮಾತನಾಡುತ್ತಾರೆ? ಅಂತಾ ಅಶ್ವಿನ್‌ ಕೇಳಿದಾಗ ವೇದಿಕೆ ಮುಂಭಾಗದಲ್ಲಿದ್ದ ಸಭೀಕರು ಕೈಎತ್ತಿದ್ದಾರೆ. ಅದೇ ರೀತಿ ಎಷ್ಟು ಜನ ತಮಿಳು ಮಾತನಾಡುತ್ತಾರೆ? ಎಂದು ಕೇಳಿದ್ದಾರೆ.. ಆಗ ಕಾರ್ಯಕ್ರಮದಲ್ಲಿದ್ದವರಲ್ಲಾ ಕೂಗಿದ್ದಾರೆ.. ನಂತರ ‘ಎಷ್ಟು ಜನ ಹಿಂದಿ ಮಾತನಾಡುತ್ತಾರೆ? ಅಂತಾ ಅಶ್ವಿನ್‌ ಎಂದಿದ್ದಾರೆ.. ಆಗ ಸಭಾಂಗಣ ಗಪ್‌ಚುಪ್‌ ಆಗಿತ್ತು. ಆಗಲೇ ನೋಡಿ ಆರ್‌. ಅಶ್ವಿನ್‌, ʼಹಿಂದಿʼ ನ್ಯಾಷನಲ್‌ ಭಾಷೆ ಅನ್ನೋರಿಗೆ ಚಮಕ್‌ ಕೊಟ್ಟಿದ್ದಾರೆ.. ‘ಹಿಂದಿ ರಾಷ್ಟ್ರಭಾಷೆಯಲ್ಲ; ಅಧಿಕೃತ ಭಾಷೆ ಅಷ್ಟೇ ಅಂತಾ ಹೇಳುವ ಮೂಲಕ ಪ್ರಾದೇಶಿಕ ಭಾಷೆಗಳ ಪರವಾಗಿ ಧ್ವನಿ ಎತ್ತಿದ್ದಾರೆ. ಇದೀಗ ಆರ್‌.ಅಶ್ವಿನ್‌ ವಿಡಿಯೋ ಫುಲ್‌ ವೈರಲ್‌ ಆಗ್ತಿದೆ. ಹಿಂದಿ ರಾಷ್ಟ್ರೀಯ ಭಾಷೆ ಎನ್ನುವವರು, ಭಾರತೀಯ ಮಾಜಿ ಕ್ರಿಕೆಟರ್‌ ಆರ್‌. ಅಶ್ವಿನ್‌ ಎಸೆದಿರುವ ಗೂಗ್ಲಿಗೆ ಅಯ್ಯಯ್ಯೋ.. ಅಯ್ಯಯ್ಯೋ.. ಅಂತಿದ್ದಾರೆ.

ನಿಮಗೆ ಗೊತ್ತಿರಲಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ,, ಹಿಂದಿ ಭಾಷೆ ಹೇರಿಕೆಯನ್ನು ದಶಕಗಳಿಂದಲೂ ವಿರೋಧಿಸುತ್ತಲೇ ಬಂದಿವೆ. ಕೇಂದ್ರ ಸರ್ಕಾರ ಹಾಗೂ ಉತ್ತರ ಭಾರತೀಯರು, ದಕ್ಷಿಣದ ರಾಜ್ಯಗಳ ಮೇಲೆ ಸಮಯ ಸಿಕ್ಕಾಗಲೆಲ್ಲಾ ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ಪ್ರಯತ್ನಿಸುತ್ತಲೇ ಇದೆ. ಹೀಗಿದ್ದೂ ದಕ್ಷಿಣ ಭಾರತೀಯರು ಹಿಂದಿ ಹೇರಿಕೆಯನ್ನು ಖಂಡಿಸುತ್ತಲೇ ಬಂದಿದ್ದಾರೆ.. ಇದೀಗ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್,  ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಎನ್ನುವ ಮಾತು ಹಿಂದಿ ಹೇರಿಕೆ ಮಾಡಲು ಹೊರಟವರಿಗೆ ಚಾಟಿ ಏಟು ಕೊಟ್ಟಂತೆ ಆಗಿದೆ.