ಕರ್ನಾಟಕ
5 ವರ್ಷ ಸಿದ್ದರಾಮಯ್ಯನೇ ಸಿಎಂ.. 2028ಕ್ಕೆ ಡಿಕೆಶಿ ಸಿಎಂ ಆಗಲಿ : ಕೆ.ಎನ್ ರಾಜಣ್ಣ
ನಾವೇನು ನಕ್ಸಲ್ ಚಟುವಟಿಕೆ ಮಾಡ್ತಿರಲಿಲ್ಲ ಪಕ್ಷದ ಹಾಗೂ ಸಮುದಾಯದ ವಿಚಾರಗಳು ಚರ್ಚೆ ಮಾಡ್ತೀದ್ವಿ ಅಷ್ಟೇ ಆದ್ರೆ ಸುರ್ಜೇವಾಲ ಸಭೆ ಮುಂದೂಡಿ ಅಂದಿದಕ್ಕೆ ಮುಂದೂಡಿದ್ದೇವೆಂದು ಆದ್ರೆ ಮುಂದೆ ಸಭೆ ಸೇರಿಯೇ ಸೇರುತ್ತೇವೆಂದು ಹೇಳಿದ್ದಾರೆ.
ಬಜೆಟ್ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾಗುತ್ತೆ ಅನ್ನೋ ಚರ್ಚೆ ಇರುವಾಗಲೇ ಸಚಿವ ಕೆ.ಎನ್ ರಾಜಣ್ಣ ಸಿದ್ದರಾಮಯ್ಯ ಪೂರ್ಣವಾದಿ ಸಿಎಂ ಎಂದು ಗುಡುಗಿದ್ದಾರೆ. 2028 ರ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಆಗ ಬೇಕಿದ್ರೆ ಡಿಕೆ ಶಿವಕುಮಾರ್ ಸಿಎಂ ಆಗಲಿ. ಈಗ ಸಿದ್ದರಾಮಯ್ಯ ಅವರನ್ನ ಇಳಿಸುವುದು ಬೇಡ ಎಂದು ಹೇಳಿದ್ದಾರೆ. ಇನ್ನೂ ದಲಿತ ಶಾಸಕರ ಸಭೆ ಮುಂದೂಡಿದಕ್ಕೆ ರಾಜಣ್ಣ ಅಸಮಾಧಾನಗೊಂಡಿದ್ದಾರೆ. ನಾವೇನು ನಕ್ಸಲ್ ಚಟುವಟಿಕೆ ಮಾಡ್ತಿರಲಿಲ್ಲ ಪಕ್ಷದ ಹಾಗೂ ಸಮುದಾಯದ ವಿಚಾರಗಳು ಚರ್ಚೆ ಮಾಡ್ತೀದ್ವಿ ಅಷ್ಟೇ ಆದ್ರೆ ಸುರ್ಜೇವಾಲ ಸಭೆ ಮುಂದೂಡಿ ಅಂದಿದಕ್ಕೆ ಮುಂದೂಡಿದ್ದೇವೆಂದು ಆದ್ರೆ ಮುಂದೆ ಸಭೆ ಸೇರಿಯೇ ಸೇರುತ್ತೇವೆಂದು ಹೇಳಿದ್ದಾರೆ. ಇನ್ನೂ ದಲಿತ ಸಿಎಂ ಕೂಗು ಇದ್ದೆ ಇದೆ ಅನ್ನೋದರ ಮೂಲಕ ಡಿಕೆಶಿಗೆ ಚೆಕ್ಮೆಟ್ ಕೊಟ್ಟಿದ್ದಾರೆ.