ಕರ್ನಾಟಕ

ಹರೀಶ್ ರಾಜ್ ನಿರ್ದೇಶನದ "ವೆಂಕಟೇಶಾಯ ನಮಃ" ಟೀಸರ್ ಬಿಡುಗಡೆ..!

ಈ ಚಿತ್ರಕ್ಕೆ ಪಿ. ಜನಾರ್ಧನ ಬಂಡವಾಳ ಹಾಕಿದ್ದು,ಈ ಚಿತ್ರದಲ್ಲಿ ಹಿರಿಯ ನಟ ಅಶೋಕ್ , ಹಿರಿಯ ನಟ ಉಮೇಶ್, ಹಾಸ್ಯ ನಟ ತಬಲಾ ನಾಣಿ ನಾಯಕಿಯಾರಾಗಿ ಪ್ರಕೃತಿ , ಆರಾಧನಾ , ನಾಯಕಿಯ ತಾಯಿಯಾಗಿ ಚಿತ್ಕಲ ಬಿರಾದರ್ , ರಾಘು ರಾಮನ ಕೊಪ್ಪ , ರೇಣುಕಾ ಮುಂತಾದವರಿದ್ದಾರೆ.

ಚಂದನವನದ ಕಲಾಕರ್  ನಟ , ನಿರ್ದೇಶಕ ಹರೀಶ್ ರಾಜ್ ಸಾರಥ್ಯದ  ಚಿತ್ರ “ವೆಂಕಟೇಶಾಯ ನಮಃ" …ಸದ್ಯ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.. ವೆಂಕಟೇಶಾಯ ನಮಃ ಚಿತ್ರ  ಇದೊಂದು ಲವ್ ಸ್ಟೋರಿಯಾಗಿದ್ದು , ಹುಡುಗಿ ಕೈ ಕೊಟ್ಟಾಗ ಲೈಫ್ ನ ಚಾಲೆಂಜ್ ಆಗಿ ತಗೊಂಡು ಲವ್ ಮಾಡದೆ,  ಹುಡುಗೀರ ಜೊತೆ ಚೆಲ್ಲಾಟವಾಡುತ್ತಾ , ಎಂಜಾಯ್ ಮಾಡಬೇಕೆಂಬ ವೆಂಕಿ ಅಲಿಯಾಸ್ ವೆಂಕಟೇಶನ ಸುತ್ತ ನಡೆಯುವ ಕಥೆ..

ಇದರಲ್ಲಿ ಹರೀಶ್ ರಾಜ್ ಸಾಫ್ಟ್ವೇರ್ ಉದ್ಯೋಗಿ ಪಾತ್ರವನ್ನು ನಿರ್ವಹಿಸಿದ್ದು, ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ರವರು ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ  ಎಂಟು ಜನ  ಹೀರೋಯಿನ್ ಗಳು ಅಭಿನಯಿಸುತ್ತಿದ್ದು , ಇಬ್ಬರು ನಾಯಕಿಯರು ಪ್ರಮುಖವಾಗಿ ಕಾಣುತ್ತಾರೆ. ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ.

ಈ ಚಿತ್ರಕ್ಕೆ  ಪಿ. ಜನಾರ್ಧನ ಬಂಡವಾಳ ಹಾಕಿದ್ದು,ಈ ಚಿತ್ರದಲ್ಲಿ ಹಿರಿಯ ನಟ ಅಶೋಕ್ , ಹಿರಿಯ ನಟ ಉಮೇಶ್,  ಹಾಸ್ಯ ನಟ ತಬಲಾ ನಾಣಿ  ನಾಯಕಿಯಾರಾಗಿ ಪ್ರಕೃತಿ , ಆರಾಧನಾ , ನಾಯಕಿಯ ತಾಯಿಯಾಗಿ ಚಿತ್ಕಲ ಬಿರಾದರ್ , ರಾಘು ರಾಮನ ಕೊಪ್ಪ , ರೇಣುಕಾ ಮುಂತಾದವರಿದ್ದಾರೆ.

ಶ್ರೀ ಲಕ್ಷ್ಮಿ ಜನಾರ್ದನ ಮೂವೀಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು , ಎರಡನೇ ಹಂತದ ಚಿತ್ರೀಕರಣವನ್ನು ಇದೇ ತಿಂಗಳು 20 ರಿಂದ ಆರಂಭ ಮಾಡಲು  ನಿರ್ಧರಿಸಿದ್ದು,  ಸುಮಾರು 45 ದಿನಗಳ ಕಾಲ ಚಿತ್ರೀಕರಣ ಮಾಡುವ ಪ್ಲಾನ್ ಚಿತ್ರತಂಡ ಹಾಕಿಕೊಂಡಿದೆ. ಈ ಚಿತ್ರಕ್ಕೆ ಶಿವಶಂಕರ್ ಛಾಯಾಗ್ರಾಹಣ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ , ಪ್ರಮೋದ್ ಮರುವಂತೆ , ಚೇತನ್ ಕುಮಾರ್ ಸಾಹಿತ್ಯ , ಜೀವನ್ ಪ್ರಕಾಶ್ ಸಂಕಲನ , ವಿನಯ್. ಜಿ. ಆಲೂರ್ ಡಿ.ಐ, ಸಂತೋಷ್. ಸಿ.ಎಂ ಸಹ ನಿರ್ದೇಶನ , ಶ್ರೀನಿವಾಸ್ ವಸ್ತ್ರಲಂಕಾರವಿದೆ.