ಕರ್ನಾಟಕ

ಕಾಂಗ್ರೆಸ್‌ ಸರ್ಕಾರದಲ್ಲಿ ಎಲ್ಲಾ ಇಲಾಖೆಗೂ ರೇಟ್‌ ಫಿಕ್ಸ್‌ ; ಹೆಚ್‌ಡಿಕೆ

ಪ್ರೀತಿ-ವಿಶ್ವಾಸದಿಂದ ನಾವು ಕೆಲಸ ಮಾಡಿದಾಗ ಚುನಾವಣೆ ಸಮಯದಲ್ಲಿ ಯಾರೋ 4 ಜನ ಬರ್ತಾರೆ,‌ ಚುನಾವಣೆ ನಡೆಸೋಕೆ ಹಣ ಕೊಡ್ತಾರೆ. ಆದರೆ ಅಧಿಕಾರ ಇಟ್ಟುಕೊಂಡು ಪ್ರತಿದಿನ ನಮ್ಮ ಸಹಿಯನ್ನು ಮಾರಾಟಕ್ಕೆ ಇಡೋಕೆ ಆಗೋದಿಲ್ಲ, ಆದರೆ ಕಾಂಗ್ರೆಸ್‌ ನಾಯಕರು ಸಹಿಯನ್ನೇ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

60% ಕಮಿಷನ್‌ ಆರೋಪ ಸಂಬಂಧ ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ನಾಯಕರ ಮಧ್ಯೆ ಜಟಾಪಟಿ ಮುಂದುವರೆದಿದೆ. ನಾನೂ ಕೂಡ ಅಧಿಕಾರ ನಡೆಸಿದ್ದೇನೆ, ನಾನು ಸತ್ಯಹರಿಶ್ಚಂದ್ರ ಅಂತ ಎಲ್ಲೂ ಹೇಳಿಲ್ಲ, ಚುನಾವಣೆ ನಡೆಯಬೇಕಾದ್ರೆ ಇನ್ನೊಬ್ಬ ಹತ್ತಿರ ಕೈ ಚಾಚಲೇಬೇಕು ಅಂತಾ ವಿಧಾನಸಭೆಯಲ್ಲಿಯೇ ಹೇಳಿದ್ದೇನೆ. ಆದರೆ ನಾನು ಅಧಿಕಾರ ನಡೆಸೋವಾಗ ಪ್ರತಿಯೊಂದು ಇಲಾಖೆಯನ್ನೂ ಮಾರಾಟಕ್ಕೆ ಇಟ್ಟಿರಲಿಲ್ಲ ಎಂದು ಗುಡುಗಿದ್ದಾರೆ. ಪ್ರತಿಯೊಂದರಲ್ಲೂ ಲೂಟಿ ಹೊಡೆದುಕೊಂಡು ಕೂತಿದ್ದಾರೆ, ಕಾಂಗ್ರೆಸ್‌ ಸರ್ಕಾರದಲ್ಲಿ ಈ ರೇಟ್ ಕಾರ್ಡ್ ಮೊದಲೇ ಫಿಕ್ಸ್ ಆಗಿ ಹೋಗಿದೆ. ನಾನು ಸತ್ಯಹರಿಶ್ಚಂದ್ರ ಅಂತ ಎಲ್ಲೂ ಹೇಳಿಲ್ಲ. ಇವತ್ತಿನ ರಾಜಕಾರಣಕ್ಕೆ ದುಡ್ಡು ಬೇಕು ಎಂದು ಹೆಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಪ್ರೀತಿ-ವಿಶ್ವಾಸದಿಂದ ನಾವು ಕೆಲಸ ಮಾಡಿದಾಗ ಚುನಾವಣೆ ಸಮಯದಲ್ಲಿ ಯಾರೋ 4 ಜನ ಬರ್ತಾರೆ,‌ ಚುನಾವಣೆ ನಡೆಸೋಕೆ ಹಣ ಕೊಡ್ತಾರೆ. ಆದರೆ ಅಧಿಕಾರ ಇಟ್ಟುಕೊಂಡು ಪ್ರತಿದಿನ ನಮ್ಮ ಸಹಿಯನ್ನು ಮಾರಾಟಕ್ಕೆ ಇಡೋಕೆ ಆಗೋದಿಲ್ಲ, ಆದರೆ ಕಾಂಗ್ರೆಸ್‌ ನಾಯಕರು ಸಹಿಯನ್ನೇ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಸೋತಿದ್ದಕ್ಕೆ 60% ಕಮಿಷನ್‌ ಆರೋಪ ಮಾಡಿದ್ದಾರೆ ಎನ್ನುವ ಸಚಿವ ಕೃಷ್ಣಬೈರೇಗೌಡ ವಿರು‍ದ್ಧವೂ ಹೆಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಾನು ಮಗ ಸೋತಿರೋದಕ್ಕೆ ಹತಾಶೆಯಾಗಿದ್ದೇನೋ, ಇಲ್ಲವೋ ಅದನ್ನ ಬಿಟ್ಟು ಬಿಡಿ. ಮೊದಲು 60% ಕಮಿಷನ್‌ಗೆ ಉತ್ತರ ಹೇಳಪ್ಪ ಎಂದು ಸವಾಲು ಹಾಕಿದ್ದಾರೆ. ಕಂದಾಯ ಇಲಾಖೆ ಏನು ಸತ್ಯವಾಗಿ ನಡೆಯುತ್ತಿದೆಯಾ? ಬೆಂಗಳೂರು ಎಸಿ ಪೋಸ್ಟ್‌ಗೆ ಎಷ್ಟು ದುಡ್ಡು ತಗೋತೀರಾ? ಎಷ್ಟು ಫಿಕ್ಸ್ ಮಾಡಿಕೊಂಡಿದ್ದೀರಾ? ಅ ಹಣ ಯಾರ್ ಯಾರಿಗೆ ಹೋಗುತ್ತೆ. ಏನ್ ಏನ್ ನಡೆಸ್ತೀರಾ ನಮಗೆ ಗೊತ್ತಿಲ್ಲವಾ? ಎನ್ನುವ ಮೂಲಕ ಹೆಚ್‌ಡಿಕೆ ಮತ್ತೊಂದು ಕಮಿಷನ್‌ ಬಾಂಬ್‌ ಸಿಡಿಸಿದ್ದಾರೆ.