ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಳೆದ ವರ್ಷ ಎಲೆಕ್ಷನ್‌ನಲ್ಲಿ ಗೆದ್ದಿದ್ದ ಟ್ರಂಪ್ ಇದೀಗ ಜನವರಿಯಲ್ಲಿ ಶ್ವೇತಭವನವನ್ನು ಪ್ರವೇಶಿಸುತ್ತಿದ್ದಾರೆ. ಆದರೆ ಅದಕ್ಕೂ ಮುನ್ನ ಡೊನಾಲ್ಡ್ ಟ್ರಂಪ್‌ಗೆ ದೊಡ್ಡ ಶಾಕ್ ಎದುರಾಗಿದೆ. ನೀಲಿ ಚಿತ್ರಗಳ ನಟಿಗೆ ಅಕ್ರಮವಾಗಿ ಹಣ ನೀಡಿರುವ ಕ್ರಿಮಿನಲ್ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿರುವ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಟೆನ್ಶನ್ ಹೆಚ್ಚಾಗಿದೆ. ಶಿಕ್ಷೆ ಪ್ರಕಟ ಮುಂದೂಡುವಂತೆ ಡೊನಾಲ್ಡ್ ಟ್ರಂಪ್ ಸಲ್ಲಿಸಿದ್ದ ತುರ್ತು ಅರ್ಜಿಯನ್ನು ಸುಪ್ರೀಂಕೋರ್ಟ್ ಪೀಠ 5-4ರ ಬಹುತಮದಿಂದ ತಿರಸ್ಕರಿಸಿದೆ. ಪ್ರಕರಣ ಸಂಬಂಧ ಇಂದು ಡೊನಾಲ್ಡ್ ಟ್ರಂಪ್‌ಗೆ ಶಿಕ್ಷೆ ಪ್ರಮಾಣ ಪ್ರಕಟವಾಗಬೇಕಿತ್ತು. ಇದನ್ನ ಮುಂದೂಡಬೇಕು ಎಂದು ಟ್ರಂಪ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಸೇರಿ ಐವರು ನ್ಯಾಯಮೂರ್ತಿಗಳು ಶಿಕ್ಷೆ ವಿಳಂಬದ ಮನವಿಯನ್ನು ತಿರಸ್ಕರಿಸಿದ್ದಾರೆ. ಸುಪ್ರೀಂಕೋರ್ಟ್ ಈ ತೀರ್ಪು, ಕೆಳನ್ಯಾಯಾಲಯಕ್ಕೆ ಶಿಕ್ಷೆಯ ಪ್ರಮಾಣ ವಿಧಿಸಲು ದಾರಿ ಮಾಡಿಕೊಟ್ಟಿದೆ.