ಸಂಕ್ರಾಂತಿ ಹೊತ್ತಿನಲ್ಲಿಯೇ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾಗೌಡಗೆ ನ್ಯಾಯಾಲಯದಿಂದ ಮತ್ತೊಂದು ಬಿಗ್ ರಿಲೀಫ್ ಸಿಕ್ಕಿದೆ. ಮೈಸೂರಿಗೆ ದರ್ಶನ್ ತೆರಳಲು ಮತ್ತು ಪವಿತ್ರಾಗೌಡಗೆ ಹೊರ ರಾಜ್ಯಕ್ಕೆ ಹೋಗಲು ನ್ಯಾಯಾಲಯ ಅನುಮತಿ ನೀಡಿದೆ. ಸಂಕ್ರಾಂತಿ ಹಿನ್ನೆಲೆ ದರ್ಶನ್‌ಗೆ ಜನವರಿ 12 ರಿಂದ 17ರವರೆಗೆ ಮೈಸೂರಿನಲ್ಲಿ ಇರಲು ಕೋರ್ಟ್ ಅನುಮತಿ ನೀಡಿದೆ. ಹೀಗಾಗಿ ಈ ಬಾರಿ ಸಂಕ್ರಾಂತಿಯನ್ನು ಮೈಸೂರಿನಲ್ಲಿ ದರ್ಶನ್ ಆಚರಿಸಲಿದ್ದಾರೆ. ಮತ್ತೊಂದೆಡೆ ಮುಂಬೈ ಮತ್ತು ದೆಹಲಿಗೆ ದೇವಸ್ಥಾನಕ್ಕೆ ತೆರಳಲು ಒಂದು ತಿಂಗಳ ಕಾಲ ಅವಕಾಶ ಕೇಳಿ ಪವಿತ್ರಾಗೌಡ ಅರ್ಜಿ ಸಲ್ಲಿಸಿದ್ದರು. ಅರ್ಜಿ ಆಲಿಸಿದ ನ್ಯಾಯಾಲಯ ದರ್ಶನ್ & ಪವಿತ್ರಾಗೌಡಗೆ ಬಿಗ್ ರಿಲೀಫ್ ನೀಡಿದೆ.