ಕರ್ನಾಟಕ

ಹೊತ್ತಿ ಉರಿದ ಸಾರಿಗೆ ಬಸ್‌; 18 ಪ್ರಯಾಣಿಕರು ಜಸ್ಟ್‌ ಮಿಸ್

ಅಶೋಕ್ ಅಂಡ್ ಲಾಜಿಸ್ಟಿಕ್ ಟ್ರಾವೆಲ್ಸ್ ಗೆ ಸೇರಿದ KA01 AL 5736 ಸಂಖ್ಯೆಯ ಬಸ್ ಚಲಿಸುತ್ತಿದ್ದ ವೇಳೆ ಟೈರ್ ಬ್ಲಾಸ್ಟ್ ಆಗಿದ್ದು, ಬಸ್‌ ಹೊತ್ತಿ ಉರಿದಿದೆ. ಕ್ಷಣಾರ್ಧದಲ್ಲೆ ಬಸ್‌ ಧಗಧಗನೆ ಹೊತ್ತಿ ಉರಿದಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಾರಿಗೆ ಬಸ್‌ ಹೊತ್ತಿ ಉರಿದಿದ್ದು, ಪ್ರಾಣಾಪಾಯದಿಂದ 18 ಮಂದಿ ಪ್ರಯಾಣಿಕರು ಜಸ್ಟ್‌ ಮಿಸ್‌ ಆಗಿದ್ದಾರೆ. ಮಂಡ್ಯದ ಸ್ಯಾಂಜೋ ಆಸ್ಪತ್ರೆ ಸಮೀಪದಲ್ಲಿ ದುರ್ಘಟನೆ ಸಂಭವಿಸಿದ್ದು, ಕಂಡಕ್ಟರ್‌ ಹಾಗೂ ಡ್ರೈವರ್‌ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಪ್ರಣ ಉಳಿದಿದೆ. 

ಅಶೋಕ್ ಅಂಡ್ ಲಾಜಿಸ್ಟಿಕ್ ಟ್ರಾವೆಲ್ಸ್ ಗೆ ಸೇರಿದ KA01 AL 5736 ಸಂಖ್ಯೆಯ ಬಸ್ ಚಲಿಸುತ್ತಿದ್ದ ವೇಳೆ ಟೈರ್ ಬ್ಲಾಸ್ಟ್ ಆಗಿದ್ದು, ಬಸ್‌ ಹೊತ್ತಿ ಉರಿದಿದೆ. ಕ್ಷಣಾರ್ಧದಲ್ಲೆ ಬಸ್‌ ಧಗಧಗನೆ ಹೊತ್ತಿ ಉರಿದಿದೆ. ವಿಚಾರ ತಿಳಿಯುತ್ತಿದ್ದಂತೆ ಮಂಡ್ಯ ಅಗ್ನಿಶಾಮಕ ದಳ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಡಿಎಫ್ಓ ರಾಘವೇಂದ್ರ ನೇತೃತ್ವದಲ್ಲಿ ಬೆಂಕಿ ನಂದಿಸಲಾಗುತ್ತಿತ್ತು. ಆದರೆ, ಅಷ್ಟರಲ್ಲಾಗಲೇ ಬಸ್‌ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.