ಬೆಂಗಳೂರು : ರಾಜ್ಯ ರಾಜಧಾನಿ ಮಂದಿಗೆ ಡಬ್ಬಲ್ ಶಾಕ್ ಎದುರಾಗಿದೆ. ಮೊನ್ನೆಮೊನ್ನೆಯಷ್ಟೇ ಬಿಎಂಟಿಸಿ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ಈಗ ಬಿಎಂಆರ್‌ಸಿಎಲ್ ಶಾಕ್ ಕೊಟ್ಟಿದೆ. ಬೆಳ್ಳಂಬೆಳಗ್ಗೆ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿದ್ದು, BMRCL ಬರೋಬ್ಬರಿ 46% ಮೆಟ್ರೋ ಪ್ರಯಾಣ ಟಿಕೆಟ್ ದರ ಹೆಚ್ಚಳ ಮಾಡಿದೆ.
ಸ್ಮಾರ್ಟ್ ಕಾರ್ಡ್ನ ಮೇಲೆ 5 ರೂ. ರಿಯಾಯ್ತಿ ಮುಂದುವರಿಕೆ ಆಗಿದ್ದು, ಸ್ಮಾರ್ಟ್‌ಕಾರ್ಡ್‌ನಲ್ಲಿದ್ದ ಮಿನಿಮಮ್ ಬ್ಯಾಲೆನ್ಸ್ 50 ರೂ. ಈಗ 90ಗೆ ಏರಿಕೆಯಾಗಿದೆ. ಈ ಮೂಲಕ ಬರೀಬ್ಬರಿ 40 ರುಪಾಯಿ ಏರಿಕೆ ಮಾಡಿದೆ.
ಇನ್ನೂ ಆಫ್-ಪೀಕ್ ಸಮಯ ಅಂದರೆ, ವಾರದ ದಿನಗಳಲ್ಲಿ, ಬೆಳಗೆ ಕಾರ್ಯಾಚರಣೆ ಆರಂಭದಿಂದ 8 ಗಂಟೆಯವರೆಗೆ, ಮಧ್ಯಾಹ 12 ಗಂಟೆಯಿಂದ 4 ಗಂಟೆಯವರೆಗೆ ಮತ್ತು ರಾತ್ರಿ 9 ಗಂಟೆಯಿಂದ ಕಾರ್ಯಾಚರಣೆ ಮುಕ್ತಾಯದವರೆಗೆ. ಎಲ್ಲಾ ಭಾನುವಾರ ಮತ್ತು ಜನವರಿ 26, ಆಗಸ್ಟ್ 15, ಅಕ್ಟೋಬರ್ 02 ಸೇರಿ ರಾಷ್ಟ್ರೀಯ ರಜಾದಿನಗ ಳಲ್ಲಿ ದಿನವಿಡೀ ಏಕರೂಪವಾಗಿ ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ 10% ರಿಯಾಯಿತಿ ನೀಡಲಾಗಿದೆ.
BMRCL ಪರಿಷ್ಕೃತ ದರ :
- 0-2 ಕಿಲೋ ಮೀಟರ್ ಪ್ರಯಾಣಕ್ಕೆ 10 ರೂ. ಏರಿಕೆ
- 2-4 ಕಿಲೋ ಮೀಟರ್ ಪ್ರಯಾಣಕ್ಕೆ 20 ರೂ. ಏರಿಕೆ
- 4-6 ಕಿಲೋ ಮೀಟರ್ ಪ್ರಯಾಣಕ್ಕೆ 30 ರೂ. ಏರಿಕೆ
- 6-8 ಕಿಲೋ ಮೀಟರ್ ಪ್ರಯಾಣಕ್ಕೆ 40 ರೂ. ಏರಿಕೆ
- 8-10 ಕಿಲೋ ಮೀಟರ್ ಪ್ರಯಾಣಕ್ಕೆ 50 ರೂ. ಏರಿಕೆ
- 10-15 ಕಿಲೋ ಮೀಟರ್ ಪ್ರಯಾಣಕ್ಕೆ 60 ರೂ. ಏರಿಕೆ
- 15-20 ಕಿಲೋ ಮೀಟರ್ ಪ್ರಯಾಣಕ್ಕೆ 70 ರೂ. ಏರಿಕೆ
- 20-25 ಕಿಲೋ ಮೀಟರ್ ಪ್ರಯಾಣಕ್ಕೆ 80 ರೂ. ಏರಿಕೆ
- 25-30 ಕಿಲೋ ಮೀಟರ್ ಪ್ರಯಾಣಕ್ಕೆ 90 ರೂ. ಏರಿಕೆ
- 30 ಕಿ.ಮೀ.ಕ್ಕಿಂತ ಹೆಚ್ಚಿನ ಪ್ರಯಾಣಕ್ಕೆ ಟಿಕೆಟ್ ದರ 90 ರೂ