ಕರ್ನಾಟಕ

ದೆಹಲಿ ಗೆಲುವು ಕರ್ನಾಟಕ, ತೆಲಂಗಾಣ ಚುನಾವಣಾಗೆ ದಾರಿದೀಪ : ಆರ್.‌ ಅಶೋಕ್

ಇಂಡಿ ಮೈತ್ರಿ ಒಕ್ಕೂಟ ಇವರನ್ನ ಟೀಕೆ ಮಾಡುತ್ತಿದ್ದಾರೆ. ಕ್ರೇಜ್ರಿವಾಲ್ ಒಬ್ಬ ಭ್ರಷ್ಟ ಅಂದಿದ್ದರು. ದೇಶಕ್ಕೆ ಮೋದಿ ಅನಿವಾರ್ಯ ಎಂಬ ಸಂದೇಶ ಬಂದಿದೆ. ಹಾಗಾಗಿ ದೆಹಲಿ ಚುನಾವಣಾ ಫಲಿತಾಂಶ ಕರ್ನಾಟಕ, ತೆಲಂಗಾಣ ಚುನಾವಣಾಗೆ ದಾರಿದೀಪವಾಗಿದೆ.

ಬೆಂಗಳೂರು : 27 ವರ್ಷದ ಬಳಿಕ ರಾಷ್ಟ್ರದ ರಾಜಧಾನಿಯಲ್ಲಿ ಬಿಜೆಪಿ ಗೆದ್ದಿದೆ. ಕುಂಭಮೇಳ ಆದ ಬಳಿಕ ಈ ಗೆಲುವು ಸಿಕ್ಕಿದೆ ಎಂದು ವಿಪಕ್ಷ ನಾಯಕ ಆರ್. ಅಶೊಕ್‌ ಸಂತಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಆರ್.‌ ಅಶೋಕ್‌, ದೆಹಲಿ ವಿಧಾನಸಭಾ ಚುನಾವಣೆ ಗೆಲುವಿನಿಂದ ಮೋದಿಯವರ ವರ್ಚಸ್ಸು ಇನ್ನೂ ಹೆಚ್ಚಾಗಿದೆ. 12 ಲಕ್ಷ ಆದಾಯ ತೆರಿಗೆ ವಿನಾಯತಿಯಿಂದ ಕೂಡ ನಮಗೆ ಲಾಭ ಆಗಿದೆ ಎಂದಿದ್ದಾರೆ. 

ಕ್ರೇಜಿವಾಲ್ ಮೊದಲು ಸಾಮಾನ್ಯವಾಗಿ ಬಂದ್ರು. ಆಮೇಲೆ ಶೀಷ್ ಮಾಲ್ ಕಟ್ಟಿದ್ರು,40 ರೂಂ,40 ಲಕ್ಷದ ಟಿವಿ ಇಟ್ಟುಕೊಂಡಿದ್ರು. ಇದನ್ನೂ ಕೂಡ ದೆಹಲಿ ಜನರು ನೋಡಿದ್ದರು. ಇಂಡಿ ಮೈತ್ರಿ ಒಕ್ಕೂಟ ಇವರನ್ನ ಟೀಕೆ ಮಾಡುತ್ತಿದ್ದಾರೆ. ಕ್ರೇಜ್ರಿವಾಲ್ ಒಬ್ಬ ಭ್ರಷ್ಟ ಅಂದಿದ್ದರು. ದೇಶಕ್ಕೆ ಮೋದಿ ಅನಿವಾರ್ಯ ಎಂಬ ಸಂದೇಶ ಬಂದಿದೆ. ಹಾಗಾಗಿ ದೆಹಲಿ ಚುನಾವಣಾ ಫಲಿತಾಂಶ ಕರ್ನಾಟಕ, ತೆಲಂಗಾಣ ಚುನಾವಣಾಗೆ ದಾರಿದೀಪವಾಗಿದೆ.