ದೇಶ

ಭಗ್ನವಾಯ್ತು ಕೇಜ್ರವಾಲ್‌ ಕನಸು.. ದಿಲ್ಲಿ ಗದ್ದುಗೆ ಏರಲು ಸಜ್ಜಾದ ಬಿಜೆಪಿ?

ಸತತವಾಗಿ ಏಳು ವರ್ಷ ಅಧಿಕಾರದಲ್ಲಿದ್ದ ಆಪ್‌ ಪಕ್ಷಕ್ಕೆ ಜನ ಸೋಲಿನ ಪಾಠ ಕಲಿಸಿದ್ದು, ಹ್ಯಾಟ್ರಿಕ್‌ ಗೆಲುವಿನಲ್ಲಿದ್ದ ಕೇಜ್ರಿವಾಲ್‌ ಕನಸು ಭಗ್ನವಾಗಿದೆ.

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಬಹಳ ಪ್ರತಿಷ್ಠೆಯ ಕ್ಷೇತ್ರವಾಗಿರುವ ರಾಜಧಾನಿ ದೆಹಲಿ ಚುನಾವಣೆಯ ಮತ ಏಣಿಕೆ ಭಾಗಶಃ ಮಕ್ತಾಯ ಹಂತಕ್ಕೆ ತಲುಪಿದ್ದು,  27 ವರ್ಷಗಳ ಬಳಿಕ ದಿಲ್ಲಿಯಲ್ಲಿ ಕಮಲ ಅರಳುವ ಭರವಸೆ ಮೂಡಿದೆ. ಪ್ರಸ್ತುತ ದೆಹಲಿ ಮುಖ್ಯಮಂತ್ರಿಯಾಗಿರುವ ಅತಿಶಿ ಹಿನ್ನಡೆಯನ್ನ ಅನುಭವಿಸಿದ್ದಾರೆ. ಜೊತೆಗೆ ಆಪ್‌ ಪಕ್ಷದ ಅಧ್ಯಕ್ಷ ಅರವಿಂದ್‌ ಕೇಜ್ರಿವಾಲ್‌ ಕೂಡ ಹಿನ್ನಡೆಯಲ್ಲಿದ್ದಾರೆ. ಇತ್ತ ಬಿಜೆಪಿ 45 ಸ್ಥಾನದಲ್ಲಿ ಮುನ್ನಡೆಯನ್ನ ಸಾಧಿಸುತ್ತಾ ಮ್ಯಾಜಿಕ್‌ ನಂಬರ್‌ ದಾಟಿದೆ. ಆದರೆ ಕಾಂಗ್ರೆಸ್‌ ಇನ್ನೂ ಖಾತೆ ತೆರೆದಿಲ್ಲಾ.

ಪೂರ್ವಾಂಚಲ ಪ್ರದೇಶದ ಮತದಾರರು ಬಿಜೆಪಿಯನ್ನ ಕೈ ಹಿಡಿದಿದ್ದು, ಬಿಜೆಪಿಗೆ ಗೆಲುವಿನ ಭರವಸೆಯುನ್ನ ಮೂಡಿಸಿದ್ದಾರೆ. ಸತತವಾಗಿ ಏಳು ವರ್ಷ ಅಧಿಕಾರದಲ್ಲಿದ್ದ ಆಪ್‌ ಪಕ್ಷಕ್ಕೆ ಜನ ಸೋಲಿನ ಪಾಠ ಕಲಿಸಿದ್ದು, ಹ್ಯಾಟ್ರಿಕ್‌ ಗೆಲುವಿನಲ್ಲಿದ್ದ ಕೇಜ್ರಿವಾಲ್‌ ಕನಸು ಭಗ್ನವಾಗಿದೆ.