ಕರ್ನಾಟಕ

ಸ್ನೇಹಿತನಿಗೂ 500 ಕೋಟಿ ಆಸ್ತಿ ಬರೆದಿಟ್ಟ ರತನ್‌ ಟಾಟಾ

ಜಮ್ಷೆಡ್‌ಪುರದವರೇ ಆಗಿದ್ದ ದತ್ತಾ,, ತಮ್ಮದೇ ಆದ ಟ್ರಾವೆಲ್‌ ಏಜೆನ್ಸಿ ಸೇರಿ ಹಲವು ಉದ್ಯಮ ಕಟ್ಟಿಕೊಂಡಿದ್ದಾರೆ. ಆದ್ರೆ ಕಾಲನಂತರದಲ್ಲಿ ಈ ಟ್ರಾವೆಲ್ಸ್‌ ಏಜೆನ್ಸಿ, ತಾಜ್‌ ಗ್ರೂಪ್‌ ಹೋಟೆಲ್ಸ್‌ನಲ್ಲಿ ವಿಲೀನವಾಯಿತು. ತಾವು ಉದ್ಯಮಿಯಾಗಿ ಬೆಳೆದರೂ ದತ್ತಾ ಜೊತೆಗೆ ರತನ್‌ ಟಾಟಾ ಉತ್ತಮ ಒಡನಾಟ ಹೊಂದಿದ್ದರು. ರತನ್‌ ಟಾಟಾ ಅವರ ಅತ್ಯಾಪ್ತರ ಲಿಸ್ಟ್‌ನಲ್ಲಿ ಮೋಹಿನಿ ಮೋಹನ್‌ ದತ್ತಾ ಹೆಸರು ಇದೆ.

ಕೊಡುಗೈದಾನಿ, ಭಾರತದ ಕೈಗಾರಿಕಾ ಕ್ರಾಂತಿ ಹರಿಹಾರ,  ಉದ್ಯಮಿಯಾದರೂ ಅತಿಯಾದ ಲಾಭದ ಬಗ್ಗೆ ತಲೆಕೆಡಿಸಿಕೊಳ್ಳದ ವ್ಯಕ್ತಿ ಅಂದ್ರೆ ಅದು ರತನ್ ಟಾಟಾ, ಸಾಮಾಜಿಕ ಜವಾಬ್ದಾರಿಗೆ ಬದ್ದರಾಗಿದ್ದರು.. ದೇಶ ಕಟ್ಟಲು ದುಡಿದವರು.. ದಾನಕ್ಕಾಗಿಯೇ ಟಾಟಾ ಟ್ರಸ್ಟ್ ಎಂಬ ದೇಶದ ದೊಡ್ಡ ಚ್ಯಾರಿಟೆಬಲ್ ಸಂಸ್ಥೆ ಹುಟ್ಟುಹಾಕಿದರು. ಇಂಥಾ ರತನ್‌ ಟಾಟಾ  2024ರ ಅಕ್ಟೋಬರ್‌ನಲ್ಲಿ ನಮ್ಮನ್ನೆಲ್ಲಾ ತ್ಯಜಿಸಿದ್ದು ನಿಮಗೆ ಗೊತ್ತೇ ಇದೆ. ಬರೋಬ್ಬರಿ 10,000 ಕೋಟಿ ರೂಪಾಯಿ ಆಸ್ತಿಯಲ್ಲಿ ಅವರ ನೆಚ್ಚಿನ ನಾಯಿ ಸಾಕೋದಕ್ಕೂ ಪಾಲು ನೀಡಿದ್ದವರು. ಅಷ್ಟೇ ಅಲ್ಲ. ಅವ್ರ ಮನೆಯ ಬಟ್ಲರ್ ಸೇರಿ ಮನೆ ಕೆಲಸಗಾರರಿಗೂ ಆಸ್ತಿ ಹಂಚಿದ್ದರು.. ಆದ್ರೆ ದೇಶ ಕಂಡ ಅಪ್ರತಿಮ ಉದ್ಯಮಿ ರತನ್‌ ಟಾಟಾ ಅವರು,, ತಮ್ಮ ಆಸ್ತಿಯಲ್ಲಿ ಬರೋಬ್ಬರಿ 500 ಕೋಟಿ ರೂಪಾಯಿ ಸಂಪತ್ತನ್ನು ದಶಕಗಳ ಹಿಂದಿನ ತಮ್ಮ ಹಾಸ್ಟೆಲ್ ರೂಂಮೇಟ್‌ ಹೆಸರಿಟ್ಟಿಗೆ ಬರೆದಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ.

ಅದು 1961. ರತನ್‌ ಟಾಟಾ, ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಜಾರ್ಖಂಡ್‌ನ ಜಮ್ಷೆಡ್‌ಪುರಕ್ಕೆ ಬಂದಿದ್ದರು. ಹೀಗೆ ಬಂದವರೇ ಟಾಟಾ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಈ ವೇಳೆ ಅವರಿಗೆ ಉಳಿದುಕೊಳ್ಳಲು ನೀಡಿದ್ದ ಸಿಬ್ಬಂದಿ ಹಾಸ್ಟೆಲ್‌ನಲ್ಲಿಯೇ ರತನ್‌ ಟಾಟಾಗೆ ಮೋಹಿನಿ ಮೋಹನ್‌ ದತ್ತಾ ಪರಿಚಯವಾಗಿತ್ತು. ಅಲ್ಲಿಂದ ಆರಂಭವಾದ ಸ್ನೇಹ ಬಳಿಕ ವ್ಯಾಪಾರದ ಪಾಲುದಾರಿಕೆಯಲ್ಲೂ ಮುಂದುವರೆದಿತ್ತು. ನಂತರದ ವರ್ಷಗಳಲ್ಲಿ ರತನ್‌, ಟಾಟಾ ಸಮೂಹದಲ್ಲಿ ಒಂದೊಂದೇ ಹೆಜ್ಜೆ ಮೇಲೇರುತ್ತಾ ಬಂದಿದ್ದರು. ಇನ್ನೊಂದೆಡೆ ಜಮ್ಷೆಡ್‌ಪುರದವರೇ ಆಗಿದ್ದ ದತ್ತಾ,, ತಮ್ಮದೇ ಆದ ಟ್ರಾವೆಲ್‌ ಏಜೆನ್ಸಿ ಸೇರಿ ಹಲವು ಉದ್ಯಮ ಕಟ್ಟಿಕೊಂಡಿದ್ದಾರೆ. ಆದ್ರೆ ಕಾಲನಂತರದಲ್ಲಿ ಈ ಟ್ರಾವೆಲ್ಸ್‌ ಏಜೆನ್ಸಿ, ತಾಜ್‌ ಗ್ರೂಪ್‌ ಹೋಟೆಲ್ಸ್‌ನಲ್ಲಿ ವಿಲೀನವಾಯಿತು. ತಾವು ಉದ್ಯಮಿಯಾಗಿ ಬೆಳೆದರೂ ದತ್ತಾ ಜೊತೆಗೆ ರತನ್‌ ಟಾಟಾ ಉತ್ತಮ ಒಡನಾಟ ಹೊಂದಿದ್ದರು. ರತನ್‌ ಟಾಟಾ ಅವರ ಅತ್ಯಾಪ್ತರ ಲಿಸ್ಟ್‌ನಲ್ಲಿ ಮೋಹಿನಿ ಮೋಹನ್‌ ದತ್ತಾ ಹೆಸರು ಇದೆ.

ವಿಶ್ವದ ಅತ್ಯಂತ ಗೌರವಾನ್ವಿತ ಉದ್ಯಮಿಗಳಲ್ಲಿ ಒಬ್ಬರೆನಿಸಿದ್ದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದರೂ, ಅವರು ಬರೆದಿಟ್ಟ ಉಯಿಲು ಈಗಲೂ ಸದ್ದು ಮಾಡುತ್ತಿದೆ. ಈ ‘ವಿಲ್’ನಲ್ಲಿ ಹಲವು ಅಚ್ಚರಿಗಳೇ ಅಡಕವಾಗಿರುವುದು ವಿಶೇಷ. .ತಮ್ಮ ಕುಟುಂಬ ಸದಸ್ಯರಿಗೆ ಮಾತ್ರವಲ್ಲ, ತಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ, ಪ್ರೀತಿಸಿದ ವ್ಯಕ್ತಿ, ಹಾಗೂ ತಮ್ಮ ಪ್ರೀತಿಯ ನಾಯಿಗೂ ಅವರು ಏನಾದರೂ ಕೊಟ್ಟೇ ಹೋಗಿದ್ದಾರೆ. ಮೋಹಿನಿ ಮೋಹನ್ ದತ್ತಾ ಎಂಬ ವ್ಯಕ್ತಿಗೆ 500 ಕೋಟಿ ರೂ ಮೌಲ್ಯದ ಆಸ್ತಿ ನೀಡಲು ರತನ್ ಟಾಟಾ ಉಯಿಲಿನಲ್ಲಿ ಬರೆದಿಟ್ಟಿದ್ದಾರೆ.. ಟಾಟಾ ದಾನಿ ಪ್ರವೃತ್ತಿ ಕಂಡು ಎಲ್ಲರೂ ನಿಬ್ಬೆರಗಾಗಿದ್ದಾರೆ.