ಕರ್ನಾಟಕ

ಚಿನ್ನದ ಬೆಲೆ ಮತ್ತೆ ಏರಿಕೆ; ಗಗನ ಕುಸುಮವಾದ ಚಿನ್ನದ ಬೆಲೆ..!

22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್​ಗೆ 15 ರೂನಷ್ಟು ಹೆಚ್ಚಳವಾಗಿದೆ. 7,930 ರೂ ಇದ್ದ ಅದರ ಬೆಲೆ 7,945 ರೂಗೆ ಏರಿದೆ. ಇನ್ನೂ 18 ಕ್ಯಾರಟ್ ಚಿನ್ನದ ಬೆಲೆ 6,800 ರೂ ಗಡಿ ದಾಟಿದೆ.

ಬೆಂಗಳೂರು : ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಮಧ್ಯಮವರ್ಗದವರಿಗಂತೂ ಚಿನ್ನಾನ್ನೋದು ಗಗನ ಕುಸುಮವಾಗಿದೆ. ವಾರಂತ್ಯದಲ್ಲಿ ಹಳದಿ ಲೋಹದ ಬೆಲೆ ತುಸು ಏರಿಕೆಯಾಗಿದೆ. ಅಪರಂಜಿ ಚಿನ್ನದ ಬೆಲೆ 8,667 ರೂಗೆ ಏರಿಕೆಯಾಗಿದ್ರೆ, 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ 15 ರೂನಷ್ಟು ಹೆಚ್ಚಳವಾಗಿದೆ. 7,930 ರೂ ಇದ್ದ ಅದರ ಬೆಲೆ 7,945 ರೂಗೆ ಏರಿದೆ. ಇನ್ನೂ 18 ಕ್ಯಾರಟ್ ಚಿನ್ನದ ಬೆಲೆ 6,800 ರೂ ಗಡಿ ದಾಟಿದೆ. 

ಭಾರತದಲ್ಲಿ ಇಂದಿನ ಚಿನ್ನ ದರ :
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,450 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 86,670 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 68,010 ರೂ
ಭುವನೇಶ್ವರ್: 79,450 ರೂ