ಕರ್ನಾಟಕ

ಪ್ರೀತಿಯ ಸೆಲೆಬ್ರಿಟಿಗಳಿಗೆ ದಚ್ಚು ಸಾರಿ ಕೇಳಿದ್ದೇಕೆ..?

ಫ್ಯಾಮಿಲಿ ಜೊತೆ ಟೈಮ್‌ ಕಳೆಯುತ್ತಾ ತಮ್ಮ ಬೆನ್ನು ನೋವನ್ನು ಮರೆಯುತ್ತಿರೋ ದರ್ಶನ್‌, ಇದ್ದಕ್ಕಿದ್ದಂತೆ ವಿಡಿಯೋ ಮಾಡಿ ಪ್ರೀತಿಯ ಸೆಲೆಬ್ರಿಟಿಗಳ ಬಳಿ ಕ್ಷಮೆ ಕೇಳಿದ್ದಾರೆ..

ರೇಣುಕಾಸ್ವಾಮಿ ಕೊಲೆ ಆರೋಪದ ಇಕ್ಕಳದಲ್ಲಿ ಸಿಲುಕಿದ್ದ ದರ್ಶನ್‌, ಜಾಮೀನು ಮೇಲೆ ಹೊರಗೆ ಬಂದು ಈಗಷ್ಟೇ ಸುಧಾರಿಸಿಕೊಳ್ತಿದ್ದಾರೆ. ಫ್ಯಾಮಿಲಿ ಜೊತೆ ಟೈಮ್‌ ಕಳೆಯುತ್ತಾ ತಮ್ಮ ಬೆನ್ನು ನೋವನ್ನು ಮರೆಯುತ್ತಿರೋ ದರ್ಶನ್‌, ಇದ್ದಕ್ಕಿದ್ದಂತೆ ವಿಡಿಯೋ ಮಾಡಿ ಪ್ರೀತಿಯ ಸೆಲೆಬ್ರಿಟಿಗಳ ಬಳಿ ಕ್ಷಮೆ ಕೇಳಿದ್ದಾರೆ..

ಹೌದು, ಫೆಬ್ರವರಿ ಅಂದ್ರೆ ದರ್ಶನ್‌ ಪಾಲಿನ ಸೆಲೆಬ್ರಿಟಿಗಳ ಪಾಲಿಗೆ ದೊಡ್ಡ ಹಬ್ಬ. ಇದೇ ಫೆಬ್ರವರಿ 16ರಂದು ಡಿ ಬಾಸ್‌ ಬರ್ತ್‌ಡೇ ಇದೆ. ಪ್ರತೀ ಹು          ಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಸೆಲೆಬ್ರೇಟ್‌ ಮಾಡ್ತಿದ್ದ ದರ್ಶನ್, ಈ ಬಾರಿ ಅಭಿಮಾನಿಗಳನ್ನ ಮೀಟ್‌ ಮಾಡೋಕೆ ಆಗೋದಿಲ್ಲ ಎಂದು ಹೇಳಿ, ಕ್ಷಮೆ ಕೇಳಿದ್ದಾರೆ.

ಪ್ರೀತಿಯ ಸೆಲೆಬ್ರಿಟಿಗಳೇ ದಯವಿಟ್ಟು ನನ್ನನ್ನು ಕ್ಷಮಿಸಿ. ನಿಮಗೆಲ್ಲ ಗೊತ್ತಿರುವ ಹಾಗೆ ನನ್ನ ಆರೋಗ್ಯ ಸರಿಯಿಲ್ಲ. ಹೀಗಾಗಿ ಈ ಬಾರಿ ನಾನು ನಿಮ್ಮ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಆಗ್ತಿಲ್ಲ. ತುಂಬಾ ಹೊತ್ತು ನಿಲ್ಲೋದಕ್ಕೂ ಆಗ್ತಿಲ್ಲ.  ಆದ್ರೆ ಮುಂಬರುವ ಹುಟ್ಟುಹಬ್ಬಗಳಲ್ಲಿ ನಾನು ನಿಮ್ಮ ಜೊತೆಯೇ ಇರ್ತೀನಿ. ಆದ್ರೆ ಈ ಬಾರಿ ನೀವು ನನ್ನನ್ನ ಕ್ಷಮಿಸಿ. ನನ್ನ ಎಲ್ಲಾ ಕೆಟ್ಟ ಸಂದರ್ಭದಲ್ಲಿ, ನೀವು ನನಗೆ ಕೊಡುವ ಪ್ರೀತಿ ಯಾವತ್ತೂ ಕಡಿಮೆಯಾಗಿಲ್ಲ. ನನ್ನೆಲ್ಲಾ ದಿನಗಳಲ್ಲಿ ನೀವು ನನ್ನ ಜೊತೆ ಪ್ರೀತಿಯಿಂದ ಇದ್ದೀರ. ನಿಮಗೆ ನಾನು ಯಾವತ್ತಿಗೂ ಚಿರಋಣಿ ಎಂದು ಹೇಳಿದ್ದಾರೆ.

ಇದೇ ವೇಳೆ ನನ್ನ ಕಷ್ಟಕಾಲದಲ್ಲಿ ಇದ್ದ ಈ ಮೂವರಿಗೆ ನಾನು ಥ್ಯಾಂಕ್ಸ್‌ ಹೇಳಲೇಬೇಕು. ಒಂದು ನಮ್ಮ ಬುಲ್‌ಬುಲ್‌ ರಚಿತಾ ರಾಮ್‌, ನನ್ನ ಸ್ನೇಹಿತೆ ರಕ್ಷಿತಾ ಹಾಗೂ ಧನ್ವೀರ್.‌ ನಿಮಗೆಲ್ಲ ನಾನು ಎಷ್ಟೇ ಥ್ಯಾಂಕ್ಸ್‌ ಹೇಳಿದರೂ ಕಮ್ಮಿ ಎಂದು ಭಾವುಕರಾಗಿದ್ದಾರೆ. ಹಾಗೇನೆ ನಾನು ಒಪ್ಪಿಕೊಂಡಿರುವ ಎಲ್ಲಾ ಸಿನಿಮಾಗಳನ್ನು ಪೂರ್ತಿ ಮಾಡ್ತೇನೆ. ನನ್ನ ಆರೋಗ್ಯ ಸ್ವಲ್ಪ ಸುಧಾರಿಸಿಕೊಂಡ ಬೆನ್ನಲ್ಲೇ ಸಿನಿಮಾ ಮಾಡ್ತೇನೆ. ನಾನು ಯಾವತ್ತೂ ಬೇರೆ ಭಾಷೆಗೆ ಹೋಗಲ್ಲ. ಯಾಕಂದ್ರೆ ನನಗೆ ಎಲ್ಲವೂ ಇಲ್ಲೇ ಸಿಕ್ಕಿರುವಾಗ ನಾನ್ಯಾಕೆ ಬೇರೆ ಕಡೆ ಹೋಗಲಿ ಎಂದು ಸ್ಪಷ್ಟನೆಯನ್ನ ಕೂಡ ನೀಡಿದ್ದಾರೆ.