ಬೆಂಗಳೂರಿನಲ್ಲಿ ಮೂಕ ಪ್ರಾಣಿಗಳ ಮೇಲಿನ ಕ್ರೌರ್ಯ ದಿನೇ ದಿನೆ ಹೆಚ್ಚಾಗುತ್ತಿದೆ. ತನ್ನ ಪಾಡಿಗೆ ಇದ್ದ ಬೀದಿ ನಾಯಿಗಳ ಮೇಲೆ ಕಾರು ಚಾಲಕರ ವಿಕೃತಿ ಮೆರೆದಿದೆ. ಸಹಕಾರ ನಗರದಲ್ಲಿ ಬೀದಿ ನಾಯಿ ಮೇಲೆ ರೆಡ್ ಕಲರ್ ಥಾರ್ ಹರಿದಿದೆ. ಜನವರಿ 4ರಂದು ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯ ನಿವಾಸಿಗಳೂ, ಪ್ರಾಣಿ ಪ್ರಿಯರೂ ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಕ-ಪಕ್ಕದ ನಿವಾಸಿಗಳಿಗೆ ಬಹಳ ಹತ್ತಿರವಾಗಿದ್ದ ನಾಯಿ ಹಾಗೂ ಮರಿಗಳಿಗೆ, ಸ್ಥಳೀಯರೆಲ್ಲ ಊಟ ಹಾಕಿ ನೋಡಿಕೊಳ್ತಿದ್ದರು. ಡಿಸೆಂಬರ್ 4ರ ನಡುರಾತ್ರಿ ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಆಟ ಆಡುತ್ತಿದ್ದವು. ಆಗ ವೇಗವಾಗಿ ಬಂದ ಥಾರ್ ಚಾಲಕ ಏಕಾಏಕಿ ನಾಯಿಗಳ ಮೇಲೆ ಕಾರು ಹರಿಸಿದ್ದ..ಒಂದು ನಾಯಿ ಮರಿ ಕಾರಿನ ಚಕ್ರಕ್ಕೆ ಸಿಕ್ಕು ಸ್ಥಳದಲ್ಲಿ ಒದ್ದಾಡಿದೆ..ನೋವು ತಾಳಲಾರದೆ ನರಳಿ-ನರಳಿ ಪ್ರಾಣ ಬಿಟ್ಟಿದೆ..ಇದರಿಂದ ಸ್ಥಳೀಯರು ಕಂಬನಿ ಮಿಡಿದು ಮನುಷ್ಯತ್ವ ಮರೆತ ಕ್ರೂರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೆಬ್ಬಾಳ ಸಂಚಾರಿ ಪೊಲೀಸರು ದೂರು ನೀಡಿದ್ದಾರೆ.