ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಸಂಬಂಧ, ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಾತನಾಡಿದ ಅವರು, ಆರ್.ಅಶೋಕ್ ಕಾನ್ಫಿಡೆನ್ಸ್ ಕಳೆದುಕೊಂಡ ಸಂದರ್ಭದಲ್ಲಿ ಈ ರೀತಿ ಮಾತನಾಡ್ತಾರೆ. ರಾಮರಾಜ್ಯವನ್ನು ಕೇಳಿದ್ದೇವೆ, ನೋಡಿಲ್ಲ. ಕುರುಕ್ಷೇತ್ರ ನೋಡಿದ್ದೇವೆ, ಸಾವಿರಾರು ವರ್ಷಗಳ ಇತಿಹಾಸ ಇದೆ. ಇಂತಹ ದುಷ್ಕರ್ಮಿಗಳನ್ನ ನೋಡಿದ್ದೇವೆ, ಕೇಳಿದ್ದೀವಿ. ಕಲಿಯುಗದಲ್ಲಿ ಇಂತಹವರ ಹೊರತುಪಡಿಸಿ ನಿರೀಕ್ಷೆ ಮಾಡೋದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಪಾಂಡವಪುರದಲ್ಲಿ ಕತ್ತು ಕಡಿದು ಹಾಕಿದ್ದಾರೆ ಅವರ ಮನೆಯಲ್ಲಿ ದುಡ್ಡು ಸಿಕ್ಕಿಲ್ಲ. ಇಂತವರನ್ನ ಪೊಲೀಸರು, ಕಾನೂನು ನಿಯಂತ್ರಣ ಮಾಡಕ್ಕಾಗಲ್ಲ. ಆ ಕಾಲದಲ್ಲೇ ಇಂತಹ ದುಷ್ಕರ್ಮಿಗಳು ಇದ್ರು, ಇದು ಕಲಿಯುಗ. ಎಚ್ಚರಿಕೆಯಿಂದ ಇರಬೇಕು, ಸರ್ಕಾರ ಕಂಟ್ರೋಲ್ ಮಾಡ್ತಿದೆ. ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದಿದ್ದಾರೆ.
ಅಲ್ಲದೇ ಹಸುಗಳ ಕೆಚ್ಚಲು ಕೊಯ್ದಿದ್ದಾರೆ, ಅವರು ಮನುಷ್ಯರು ಅಲ್ಲ. ಯಾರೇ ಮಾಡಿದ್ರು ಅವರಿಗೆ ಕಾನೂನು ಕ್ರಮವಾಗುತ್ತದೆ. ವಿರೋಧ ಪಕ್ಷದ ಟೀಕೆಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಆರ್. ಅಶೋಜ್ ಅವರು ಕಾನ್ಫಿಡೆನ್ಸ್ ಕಳೆದುಕೊಂಡ ಸಂದರ್ಭದಲ್ಲಿ ಈ ರೀತಿ ಮಾತನಾಡ್ತಾರೆ ಎಂದು ಕಿಡಿ ಕಾರಿದ್ದಾರೆ.