ವೈರಲ್

ದೇವಸ್ಥಾನದಿಂದ ವಾಪಸ್ ಆಗುವಾಗ ಕಾರು ಹರಿದು ಮಗು ಸಾವು..!

ದೇವರ ದರ್ಶನ ಮುಗಿಸಿಕೊಂಡು ಬರುತ್ತಿದ್ದ ವೇಳೆ, ಕಾರು ಚಾಲಕನೊಬ್ಬನ ನಿರ್ಲಕ್ಷ್ಯಕ್ಕೆ ಪುಟ್ಟ ಮಗುವೊಂದು ಬಲಿಯಾಗಿದೆ.

ದೇವರ ದರ್ಶನ ಮುಗಿಸಿಕೊಂಡು ಬರುತ್ತಿದ್ದ ವೇಳೆ, ಕಾರು ಚಾಲಕನೊಬ್ಬನ ನಿರ್ಲಕ್ಷ್ಯಕ್ಕೆ ಪುಟ್ಟ ಮಗುವೊಂದು ಬಲಿಯಾಗಿದೆ. ಈ ಘಟನೆ ಬೆಂಗಳೂರು ಗ್ರಾಮಾಂತರದ ಆನೇಕಲ್ ನ ಬನ್ನೇರುಘಟ್ಟದ ಬಳಿ ನಡೆದಿದೆ. ಬನ್ನೇರುಘಟ್ಟ ರಸ್ತೆಯ ಶನೇಶ್ವರ ದೇವಸ್ಥಾನ ಮುಂಭಾಗದಲ್ಲಿ ಘಟನೆ ನಡೆದಿದೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ ಶನೇಶ್ವರ ದೇವಸ್ಥಾನಕ್ಕೆ ತಾಯಿ ಜೊತೆ 2 ವರ್ಷದ ಮಗು, ಏಕಾಶ್ ಕೂಡ ಬಂದಿದ್ದ. ದೇವರ ದರ್ಶನ ಮುಗಿಸಿಕೊಂಡು ದೇವಸ್ಥಾನದಿಂದ ಹೊರ ಬಂದ ತಕ್ಷಣ, ಕಾರೊಂದು ಮಗುವಿನ ಮೇಲೆ ಹರಿದಿದೆ. ಸ್ಥಳೀಯರ ನೆರವಿನಿಂದ ಮಗುವಿನ ಮೃತ ದೇಹವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.