ದೇಶದ ಗಮನ ಸೆಳೆದ ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಆಮ್ ಆದ್ಮಿಗೆ ಹ್ಯಾಟ್ರಿಕ್ ಗೆಲುವು ದೊರಕುತ್ತಾ ಅಥವಾ 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯ ಕಮಲ ಅರಳುತ್ತಾ ಎಂದ ದೊಡ್ಡ ಕುತೂಹಲಕ್ಕಿಂದು ತೆರೆ ಬೀಳಲಿದೆ.
ದೆಹಲಿಯಲ್ಲಿ ಬಿಜೆಪಿ ಹಾಗೂ ಆಪ್ ನಡುವೆ ಬಾರಿ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಹೋರಾಟಕ್ಕಿಳಿದಿದೆ. ಇಂದು ಜನಾದೇಶ ಹೊರಬೀಳಲಿದ್ದು, ದೆಹಲಿ ಗದ್ದುಗೆ ಯಾರಿಗೆ ಎಂಬ ಪ್ರಶ್ನೆಗೆ ಇಂದೇ ಉತ್ತರ ದೊರಕಲಿದೆ. ಇಂದು ಎಕ್ಸಿಟ್ ಪೋಲ್‌ಗಳು ದಿಲ್ಲಿಯಲ್ಲಿ ಕಮಲ ಅರಳಲಿದೆ. ಆಪ್‌ಗೆ ಈ ಬಾರಿ ದೊಡ್ಡ ಮುಖಭಂಗವಾಗಲಿದೆ ಎಂದು ಭವಿಷ್ಯ ನುಡಿದಿವೆ.
ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದ್ದು, 11 ಜಿಲ್ಲೆಗಳ 19 ಕೇಂದ್ರಗಳಲ್ಲಿ ಮತಗಳ ಎಣಿಕೆ ಶುರುವಾಗಿದೆ. ದೆಹಲಿಯ 70 ಕ್ಷೇತ್ರಗಳಲ್ಲಿ 699 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, 19 ಎಣಿಕಾ ಕೇಂದ್ರದಲ್ಲಿ 5,000 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.