ವಿಜಯೇಂದ್ರ ವರ್ಸಸ್ ಯತ್ನಾಳ್ ಬಣದ ಫೈಟ್ ನಡುವೆ ಗಣಿ- ಧಣಿಗಳ ಕಾಳಗ ಶುರುವಾಗಿದೆ. ಒಂದು ಕಾಲದ ಕುಚುಕು ಗೆಳೆಯಾರದ ಶ್ರೀರಾಮುಲು ಹಾಗೂ ಗಾಲಿ ಜನಾರ್ಧನ ರೆಡ್ಡಿ ಮಧ್ಯೆ ಸಂಡೂರು ಸಮರ ಏರ್ಪಟ್ಟಿದೆ. ಇದರಿಂದಾಗಿ ಯತ್ನಾಳ್ ಬಣ ಸೇರಿ ವಿಜಯೇಂದ್ರ ಟೀಂ ವಿರುದ್ಧ ಸಮರ ಸಾರ್ತಾರಾ ರಾಮುಲು ಎಂಬ ಅನುಮಾನವೀಗ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ.
ವಿಜಯೇಂದ್ರ ಹಾಗೂ ಯತ್ನಾಳ್ ನಡುವಿನ ಆಂತರಿಕ ಕಿತ್ತಾಟವನ್ನ ತಣ್ಣಗಾಗಿಸಲು ಬಂದ ಉಸ್ತುವಾರಿಗೆ ಗಣಿಧಣಿಗಳ ಕಿತ್ತಾಟ ಸಂಕಷ್ಟ ತಂದಿಟ್ಟಿದೆ. ಕೋರ್ ಕಮಿಟಿ ಸಭೆಯಲ್ಲಿ ಸ್ಪೋಟಗೊಂಡ ಶ್ರೀರಾಮುಲು ಸಿಟ್ಟು ಇದೀಗ ಹಾದಿ ಬೀದಿ ಜಗಳಕ್ಕೆ ಕಾರಣವಾಗಿದೆ. ವಿಜಯೇಂದ್ರ ಬಣದಲ್ಲಿ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಗುರುತಿಸಿಕೊಂಡಿದ್ದರು. ಆದರೆ ಸಂಡೂರು ಸೋಲಿಗೆ ರಾಮುಲುವಿ ಕಾರಣ ಎಂಬ ಸಂಧಾನಕಾರ ರಾಧಾಮೋಹನ್ ದಾಸ್ ವಾಗ್ಭಾಣಕ್ಕೆ ಕೆರಳಿಕೆಂಡವಾಗಿರುವ ರಾಮುಲು, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈಗಾಗಲೇ ಬಿಎಲ್ ಸಂತೋಷ್ & ಅರ್‌ಎಸ್‌ಎಸ್ ಮುಖಂಡರಿಗೂ ಈ ಬಗ್ಗೆ ದೂರು ನೀಡಿದ್ದಾರೆ.
ದಿನದಿಂದ ದಿನಕ್ಕೆ ವಿಜಯೇಂದ್ರ ಟೀಂ ವಿರುದ್ಧ ಬಂಡಾಯದ ಬೇಗುದಿ ಹೆಚ್ಚಾಗುತ್ತಿದ್ದು, ಬಿಜೆಪಿ ಹೈಕಮಾಂಡ್‌ಗೆ ಇದು ಬಗೆಹರಿಸಲಾಗದ ತಲೆನೋವಾಗಿ ಪರಿಣಮಿಸಿದೆ.