ದುಷ್ಕರ್ಮಿಯಿಂದ ಚಾಕು ಇರಿತಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಬಾಲಿವುಡ್ ನಟ ಸೈಫ್ ಅಲಿಖಾನ್ ಬಗ್ಗೆ ಮಹಾರಾಷ್ಟ್ರ ಸಚಿವ ನಿತೀಶ್ ರಾಣೆ ಶಾಕಿಂಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ನಟನ ಮೇಲೆ ದಾಳಿಯಾಗಿರುವ ಬಗ್ಗೆಯೇ ಶಂಕೆ ಇದೆ. ಅವರು ನಟಿಸುತ್ತಿದ್ದಂತೆ ಭಾಸವಾಗುತ್ತಿದೆ ಎಂದಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆಸಿದ ಚಾಕು ದಾಳಿಯಲ್ಲಿ 6ಕ್ಕೂ ಹೆಚ್ಚು ಸಲ ಇರಿತದ ಗಾಯಗಳಾಗಿವೆ ಎಂದು ಹೇಳಿದ್ದು ನಿಜದಂತೆ ಕಾಣುತ್ತಿಲ್ಲ. ಮುಂಬೈನಲ್ಲಿ ಬಾಂಗ್ಲಾದೇಶಿಗಳು ಏನು ಮಾಡುತ್ತಿದ್ದಾರೆಂದು ನೋಡಿ. ಅವರು ಸೈಫ್ ಅಲಿ ಖಾನ್ ಮನೆಗೆ ಪ್ರವೇಶಿಸಿದ್ದಾರೆ. ಬಹುಶಃ ಅವರು ಸೈಫ್ ಅಲಿ ಖಾನ್‌ರನ್ನು ಕರೆದುಕೊಂಡು ಹೋಗಲು ಬಂದಿರಬಹುದು. ಇದು ಒಳ್ಳೆಯ ಕೆಲಸ. ಕಸವನ್ನು ತೆಗೆದುಕೊಂಡು ಹೋಗಬೇಕು ವಿವಾದಿತ ಹೇಳಿಕೆ ನೀಡಿದ್ದಾರೆ.
ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಹೊರಗೆ ಬಂದಾಗ ನಾನು ನೋಡಿದೆ, ಅವನು ನಡೆದುಕೊಂಡು ಹೋಗುತ್ತಿದ್ದಾನಾ ಎಂದು ನನಗೆ ಅನುಮಾನವಾಯಿತು. ಶಾರುಖ್ ಖಾನ್ ಅಥವಾ ಸೈಫ್ ಅಲಿಖಾನ್‌ನಂತಹ ಯಾವುದೇ ಖಾನ್‌ಗೆ ನೋವಾದಾಗ ಎಲ್ಲರೂ ಮಾತನಾಡ್ತಾರೆ. ಸುಶಾಂತ್ ಸಿಂಗ್ ರಜಪೂತ್‌ನಂತಹ ಹಿಂದೂ ನಟನಿಗೆ ಚಿತ್ರಹಿಂಸೆಯಾದಾಗ, ಯಾರೂ ಏನನ್ನೂ ಹೇಳಲು ಮುಂದೆ ಬರುವುದಿಲ್ಲ. ಅವರಿಗೆ ಸೈಫ್ ಅಲಿ ಖಾನ್, ಶಾರುಖ್ ಖಾನ್ ಮಗ ಮತ್ತು ನವಾಬ್ ಬಗ್ಗೆ ಮಾತ್ರ ಚಿಂತೆ. ಯಾವತ್ತಾದರೂ ಹಿಂದೂ ಕಲಾವಿದರ ಬಗ್ಗೆ ಚಿಂತಿಸುವುದನ್ನು ನೀವು ನೋಡಿದ್ದೀರಾ. ಹುಡುಗರೇ ಈ ಎಲ್ಲಾ ವಿಷಯಗಳತ್ತ ಗಮನ ಹರಿಸಬೇಕು ಎಂದಿದ್ದಾರೆ.